ಕಾಸರಗೋಡು, ಮಾ. 21 (DaijiworldNews/TA): ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಉಳಿಯುತ್ತಿದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದರು.


ಎಲ್ ಡಿ ಎಫ್ ನಿಂದ ಮಂಜೇಶ್ವರದಿಂದ ಕೆ.ಆರ್ ಜಯಾನಂದ, ಉದುಮದಿಂದ ಸಿ. ಎಚ್ ಕುಞoಬು, ಕಾಞಂಗಾಡ್ ನಿಂದ ಗೋವಿಂದನ್ ಪಳ್ಳಿ ಕಾಪಿಲ್, ತೃ ಕ್ಕರಿಪುರದಿಂದ ವಿ ಪಿ. ಪಿ ಮುಸ್ತಫಾ ನಾಮಪತ್ರ ಸಲ್ಲಿಸಿದರು. ಯು ಡಿ ಎಫ್ ನಿಂದ ಉದುಮ ಕ್ಷೇತ್ರದ ಅಭ್ಯರ್ಥಿ ಕೆ.ನೀಲಕಂಠನ್, ಬಿಜೆಪಿ ಯಿಂದ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಶನಿವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆ ದಿನವಾಗಿದೆ.