ಕಾಸರಗೋಡು, ಡಿ 18 : ಅಕ್ರಮ ಮರಳುಗಾರಿಕೆ ಕೇಂದ್ರಕ್ಕೆ ದಾಳಿ ನಡೆಸಿದ ಕಾಸರಗೋಡು ಮತ್ತು ವಿದ್ಯಾನಗರ ಠಾಣಾ ಪೊಲೀಸರು ಡಿ18 ರ ಸೋಮವಾರ ಮರಳುಗಾರಿಕೆ ನಡೆಸುತ್ತಿದ್ದ ಸುಮಾರು18 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.ಇವುಗಳಲ್ಲಿ 15ದೋಣಿಗಳನ್ನು ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶಗಳಿಂದ ವಶಪಡಿಸಲಾಗಿದೆ.
ಚೆಂಗಳ, ಪಾಣಳಂ, ಹಾಗೂ ಚೇರೂರು ಮೊದಲಾದೆಡೆಗಳಲ್ಲಿ ಕಾರ್ಯವೆಸಗುತ್ತಿದ್ದ ಮರಳುಗಾರಿಕೆ ಕೇಂದ್ರಗಳಿಗೆ ದಾಳಿ ನಡೆಸಲಾಗಿದ್ದು , ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ಇವರೆಲ್ಲ ಹೊರ ರಾಜ್ಯ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ .ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.