ಮಂಗಳೂರು, ಮಾ. 29 (DaijiworldNews/AA): ಮಂಗಳೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಆಗಿರುವ ಶೆರಿಲ್ ಆಯೋನ ಐಮನ್ ಅವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.


ಶೆರಿಲ್ ಆಯೋನ ಐಮನ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ 'ಡಿಸೈನ್ ಅಂಡ್ ಇಂಪ್ಲಿಮೆಂಟೇಶನ್ ಆಫ್ ಎಫಿಷಿಯೆಂಟ್ ನ್ಯಾನೋ ಮೆಟೀರಿಯಲ್ ಫಾರ್ ಎನರ್ಜಿ ಸ್ಟೋರೇಜ್ ಸೆನ್ಸಸ್ ಅಂಡ್ ಫೋಟೋ ಕೆಟಲೊಸಿಎಸ್ ಅಪ್ಲಿಕೇಶನ್ಸ್' ವಿಷಯಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಸಂಸ್ಥೆಯು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಶನಿವಾರ ನಡೆದ ಶ್ರೀನಿವಾಸ ವಿಶ್ವವಿದ್ಯಾಲಯ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರು ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಶೆರಿಲ್ ಪ್ರಸ್ತುತ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರು ಶ್ರೀನಿವಾಸ ವಿವಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಡಾ.ನವೀನ್ ಕುಮಾರ್ ಜೆ.ಆರ್. ಅವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು.
ಶೆರಿಲ್ ಅವರು ಮೂಲತಃ ಹಳೆಯಂಗಡಿಯ ದಿ. ಸ್ಟೀಫನ್ ಸುಕುಮಾರ್ ಐಮನ್ ಮತ್ತು ಐರಿನ್ ಪುಷ್ಪ ಐಮನ್ ಪುತ್ರಿ. ಮಂಗಳೂರು ಮಡಿಕೇರಿಗುಡ್ಡೆ ಸಿಎಸ್ಐ ಚರ್ಚ್ ಸಭಾ ಪರಿಪಾಲನ ಸಮಿತಿಯಲ್ಲಿ ಕೌನ್ಸಿಲ್ ಸದಸ್ಯರಾಗಿ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ.