ಸುಳ್ಯ, ಮಾ. 29 (DaijiworldNews/TA): ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ಮಾರ್ಚ್ 28, 29,ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಮಾ 21 ರಂದು ಮಹೂರ್ತದ ಗೊನೆ ಕಡಿಯಲಾಯಿತು.. ಮಾ 28 ರಂದು ರಾತ್ರಿ 7 ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಟಿತು.. ಮಾರ್ಚ್ 29 ರಂದು ಬೆಳಿಗ್ಗೆ ಮಹಾವಿಷ್ಣು ಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ, ಮಾರಿಕಳ ಪ್ರವೇಶ ನಡೆಯಿತು. ಬಳಿಕ ಹರಕೆಯ ಸುರಿಗೆಗಳನ್ನು ಒಪ್ಪಿಸಲಾಯಿತು.