ವಿಟ್ಲ, ಮಾ. 29 (DaijiworldNews/TA): ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಪಾಮ್ ಸಂಡೇ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು. ಚರ್ಚ್ ಸಭಾಂಗಣದ ಬಳಿಯಲ್ಲಿ ಧರ್ಮಗುರು ವಂ. ಸೈಮನ್ ಡಿಸೋಜಾ ಅವರ ನೇತೃತ್ವದಲ್ಲಿ ಗರಿಗಳ ಆಶೀರ್ವಚನ, ಪವಿತ್ರ ಬೈಬಲ್ ವಾಚನ ನಡೆಯಿತು.

ಬಳಿಕ ಗರಿಗಳನ್ನು ಹಿಡಿದುಕೊಂಡು ಕ್ರೈಸ್ತರು ಚರ್ಚ್ ಗೆ ಮೆರವಣಿಗೆ ನಡೆಸಿದರು. ಚರ್ಚ್ ನಲ್ಲಿ ನಡೆದ ಬಲಿಪೂಜೆಯ ವೇಳೆ ಕ್ರಿಸ್ತರ ಶಿಲುಬೆ ಪಯಣ ಹಾಗೂ ಮರಣದ ಕಥನ ವಾಚಿಸಲಾಯಿತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಮತ್ತಿತರರು ಇದ್ದರು.