ಬಂಟ್ವಾಳ, ಮಾ. 30 (DaijiworldNews/TA) : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡು ಜಂಕ್ಷನ್ ನಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿದೆ ಎಂಬುದರ ಕುರಿತು ವ್ಯಕ್ತಿಯೋರ್ವರು ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಖಾಲಿದ್ ನಂದಾವರ ಎಂಬವರು ಕಾರಿನಲ್ಲಿ ಸಂಚರಿಸುವ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗಿದ್ದ ವಾಹನಗಳ ವಿಡಿಯೋ ಮಾಡಿದ್ದಾರೆ. ಬಿ.ಸಿ.ರೋಡಿನಲ್ಲಿ ಇತ್ತೀಚಿಗೆ ನಿರ್ಮಾಣವಾದ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ಮುಂಭಾಗದಿಂದ ಬಿಸಿರೋಡು ಬಸ್ ತಂಗುದಾಣದವರೆಗೆ ರಸ್ತೆ ಬದಿಯಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳುತ್ತಾರೆ ಎಂಬುವುದಾಗಿ ತಿಳಿಸಿದ್ದಾರೆ.
ಸಂಜೆ ವೇಳೆಯಂತೂ ಸ್ಮಾರ್ಟ್ ಸಿಟಿ ಮುಂಭಾಗದಲ್ಲಿ ರಸ್ತೆ ಮೇಲೆಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಪಾದಾಚಾರಿಗಳಿಗೆ ನಡೆದಾಡಲೂ ಸಾಧ್ಯವಿಲ್ಲದಂತೆ ಸಮಸ್ಯೆಯಾತ್ತಿವೆ. ಆದರೂ ಟ್ರಾಫಿಕ್ ಪೊಲೀಸರು ಮೌನವಾಗಿರುವುದರ ಹಿಂದೆ ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡತೊಡಗಿದೆ.