ಉಡುಪಿ, ಮಾ. 30 (DaijiworldNews/TA): ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಕಲ್ಯಾಣಪುರ ಮೇಲ್ಸೇತುವೆ ಕೊನೆಗೂ ಮಾರ್ಚ್ 30 ರಂದು ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿದೆ. 2022 ರಲ್ಲಿ ಆರಂಭಗೊಂಡ ಅಂಡರ್ಪಾಸ್ ಹಾಗೂ ಮೇಲ್ಸೆತುವೆ ಕಾಮಗಾರಿ ಬರೋಬ್ಬರಿ 4 ವರ್ಷಗಳ ನಂತರ ಸಾರ್ವಜನಿಕ ಸೇವೆಗೆ ಲಭಿಸಿದೆ.









ಅಂಡರ್ಪಾಸ್ ರಸ್ತೆಯ ಕೆಲಸ ಆರಂಭವಾದ ನಂತರ ಉಡುಪಿಗೆ ಹೋಗುವಾಗ ಎಡಭಾಗದಲ್ಲಿ ಕಾಣಸಿಗುವ ಎಲ್ಲಾ ವ್ಯಾಪಾರಸ್ಥರು ವ್ಯವಹಾರವಿಲ್ಲದೆ ಆರ್ಥಿಕ ಸೋಲನ್ನು ಕಂಡಿದ್ದರು. ಹಿಂದಿನ ಸಂಸದರು ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸದ ವೇಗ ಹೆಚ್ಚಿಸಲು ಸಂಪೂರ್ಣ ವಿಫಲರಾದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಯತ್ನದ ಫಲದಿಂದ ಕೊನೆಗೂ ರಸ್ತೆ ಹಾಗೂ ಮೇಲ್ಸೆತುವೆ ಸಂಚಾರಕ್ಕೆ ಇಂದು ಮುಕ್ತಗೊಂಡಿದೆ. ಇಂದು ಮೇಲ್ಸೆತುವೆ ಅಧಿಕೃತವಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾರ್ವಜನಿಕರ ಸಂಚಾರಕ್ಕೆ ತುರ್ತು ಅವಕಾಶ ಕಲ್ಪಿಸಿದರು.
ಈ ಸಂದರ್ಭ ಅವರು ಮಾತನಾಡಿದ ಅವರು ಕಲ್ಯಾಣಪುರ ಮೇಲ್ಸೇತುವ ಅಂಡರ್ಪಾಸ್ ಸಾಕಷ್ಟು ವಿಳಂಬವಾಗಿತ್ತು ಎನ್ನುವ ದೂರು ಇದ್ದದ್ದು ಸತ್ಯ. 2022ರ ಆರಂಭದಲ್ಲಿ ತೆರೆ ಕಂಡ ಕಾಮಗಾರಿ ಸುಮಾರು 4 ವರ್ಷಗಳ ಕಾಲ ತೆಗೆದುಕೊಂಡಿದೆ. ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದೆ. ಆದರೆ ಮಳೆಗಾಲ ಬರುತ್ತಿರುವುದರಿಂದ ಮೇಲ್ಸೇತುವೆಯನ್ನು ಇಂದು ತುರ್ತು ಸಾರ್ವಜನಿಕೆ ಸೇವೆಗೆ ಬಿಡುಗಡೆ ಮಾಡುತ್ತಿದ್ದೇವೆ. ಅಧಿಕೃತ ಉದ್ಘಾಟನೆಯನ್ನು ಶಾಸಕ ಯಶಪಾಲ್ ಸುವರ್ಣ ಹಾಗೂ ಇನ್ನಿತರರ ಜೊತೆಗೂಡಿ ಮತ್ತೆ ಮಾಡಲಿದ್ದೇವೆ. ವಾಹನದಟ್ಟಣೆ ನಿವಾರಣೆಗಾಗಿ ಈ ಮೇಲ್ಸ್ತುವೆಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.