ಸುಳ್ಯ, ಮಾ. 31(DaijiworldNews/TA): ಮಡಪ್ಪಾಡಿ ಗ್ರಾಮದ ಪೂಂಬಾಡಿ ಭಾಗದಲ್ಲಿ ಕಳೆದ ಹಲವು ಸಮಯಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ಆ ಪರಿಸರದಲ್ಲಿ ತೋಟಕ್ಕೆ ದಾಳಿ ನಡೆಸಿದೆ.

ದಾಳಿಯ ಪರಿಣಾಮ 60ಕ್ಕೂ ಹೆಚ್ಚು ಫಸಲು ಬರಲು ತಯಾರಾದ ತೆಂಗಿನ ಮರ, ಬಾಳೆ ಗಿಡಗಳು ನಾಶವಾಗಿದೆ. ನಿತ್ಯಾನಂದ ಪೂಂಬಾಡಿ, ಶಿವಪ್ಪ ಗೌಡ ಪೂಂಬಾಡಿ, ಚಿನ್ನಪ್ಪ ಗೌಡ ರವರ ತೋಟಕ್ಕೆ ದಾಳಿ ನಡೆಸಿರುವ ಕಾಡನೆಗಳ ಹಿಂಡು, ಬೆಳೆದಿದ್ದ ತೆಂಗಿನ ಕೃಷಿಯನ್ನು ನಾಶ ಮಾಡಿವೆ.