ಕುಂದಾಪುರ, ಆ 06 (Daijiworld News/MSP): ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದಲ್ಲಿ ಸುಮಾರು ಕ್ರಿ.ಶ 7-8 ಶತಮಾನಕ್ಕೆ ಸಂಬಂಧ ಪಟ್ಟ ಆಳುಪ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದ್ದು,ಈ. ಶಾಸನವನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕರಾದ ಪ್ರೋ.ಪುರುಷೋತ್ತಮ ಬಲ್ಯಾಯರು, ಪ್ರದೀಪ ಕುಮಾರ್ ಬಸ್ರೂರು ಹಾಗೂ ನಿವೃತ್ತ ಉಪನ್ಯಾಸಕರಾದ ಪ್ರೊ.ಬಿ.ಭಾಸ್ಕರ್ ಶೆಟ್ಟಿಯವರ ಸಹಕಾರದೊಂದಿಗೆ ಪತ್ತೆ ಹಚ್ಚಿದೆ.
ಈ ಶಾಸನದ ಹಳೆಗನ್ನಡ ಲಿಪಿಯನ್ನು ಸುಮಾರು ಕ್ರಿ.ಶ 7-8ನೇ ಶತಮಾನದ ಲಿಪಿ ಎಂದು ಲಿಪಿ ತಜ್ಞರು ಅಂದಾಜಿಸಿದ್ದು, ಎರಡನೇಯ ಆಳುಪರಸನ ಕಾಲಕ್ಕೆ ಸಂಬಂಧಿಸಿದೆಂದು ಪರಿಗಣಿಸಬಹುದಾಗಿದೆ. ಈ ಶಾಸನದಲ್ಲಿ " ಪಾಂಡ್ಯ ಅಳುಪೇಂದ್ರ" "ಪಟ್ಟಿಯಪುರಿ" (ಹಟ್ಟಿಯಂಗಡಿ) ಹಾಗೂ "ಭಟ್ಟರಕ" ಎಂಬ ಶಬ್ದಗಳು ಬಂದಿದ್ದು, ಎರಡೂ ಬದಿಗಳಲ್ಲಿ ಬರೆಯಲ್ಪಟ್ಟಿದೆ. ಪಾಂಡ್ಯ ಕುಲವ ಸ್ತುತಿಯ ಕ್ರಿ.ಶ 8 ನೇ ಶತಮಾನದ ಬೆಳ್ಮಣ್ಣು ತಾಮ್ರ ಶಾಸನ ಹಾಗೂ ಪೊಳಲಿ ಅಮ್ಮುಂಜೆ ಶಾಸನದಲ್ಲಿ ಬಂದಿರುವುದನ್ನು ಗಮನಿಸಬಹುದು.
ಈ ಶಾಸನದ ಸಮಗ್ರ ಅಧ್ಯಯನದಿಂದ, ಈ ನಾಡನ್ನು ಬಹುಕಾಲ ಆಳಿದ ಆಳುಪ ಅರಸದ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದು.