ಮಂಗಳೂರು, ಆ 07 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇರೋದರಿಂದ ಹಾಗೂ ಈಗಾಗಲೇ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆ ಆಗಸ್ಟ್ 8ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸೋಮವಾರದಿಂದ ಕರಾವಳಿ ಭಾಗದಲ್ಲಿ ಬಿರುಸಿನಿಂದ ಮಳೆ ಸುರಿಯುತ್ತಿದ್ದು, ಬುಧವಾರದಂದು ಒಂದಿಷ್ಟು ಬಿಡುವನ್ನು ಪಡೆದುಕೊಂಡಿತ್ತು. ಇದರಿಂದ ತುಂಬಿ ಹರಿಯುತ್ತಿದ್ದ ಹಳ್ಳ, ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಆದ್ರೆ, ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಲ್ಲಿ ಆಗಸ್ಟ್ 9ರ ತನಕ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಗುರುವಾರದಂದೂ ಕೂಡ ರಜೆ ಘೋಷಿಸಲಾಗಿದೆ.
ಅಂಗನವಾಡಿಯಿಂದ ಹಿಡಿದು ಪದವಿ ತರಗತಿಗಳ ತನಕ ರಜೆ ಘೋಷಣೆ ಮಾಡಲಾಗಿದೆ.