ಕಾಸರಗೋಡು ಡಿ19: ಚಿಮೇನಿ ಪುಲಿಯನ್ನೂರಿನಲ್ಲಿ ನಡೆದ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡಕ್ಕೆ ಆರೋಪಿಗಳ ಸುಳಿವು ಇನ್ನೂ ಲಭಿಸಿಲ್ಲ . ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿದ್ದ ಪೊಲೀಸರ ವಿಶೇಷ ತಂಡ ಬರಿಗೈ ಯಲ್ಲಿ ಮರಳಿದೆ. ಸಾಂಗ್ಲಿ ಯಿಂದ ವಾಹನದಲ್ಲಿ ಹಣ್ಣು ಹಂಪಲು ಮಾರಾಟಕ್ಕೆ ಬಂದಿದ್ದ ತಂಡ ಕೃತ್ಯ ನಡೆಸಿತ್ತು ಎಂಬ ಮಾಹಿತಿಯಂತೆ ಸಾಂಗ್ಲಿಗೆ ತೆರಳಿ ತನಿಖೆ ನಡೆಸಿದಾಗ ಯಾವುದೇ ಮಾಹಿತಿ ತನಿಖಾ ತಂಡಕ್ಕೆ ಲಭಿಸಿಲ್ಲ .ಸ್ಥಳೀಯರು ಸೇರಿದಂತೆ ನೂರಕ್ಕೂ ಅಧಿಕ ಮಂದಿಯನ್ನು ವಿಚಾರಣೆ ಗೊಳಪಡಿಸಿರುವುದಾಗಿ ತನಿಖಾ ತಂಡ ತಿಳಿಸಿದೆ. 22 ಮಂದಿಯ ತನಿಖಾ ತಂಡ ತನಿಖೆ ನಡೆಸುತ್ತಿದೆ.
ಈ ಹಿಂದೆ ಕಣ್ಣೂರು ಮತ್ತು ಪಾಲಕ್ಕಾಡ್ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಇದೇ ರೀತಿಯ ದರೋಡೆ ನಡೆದಿದ್ದು , ಇದರಿಂದ ಇಲ್ಲಿ ಲಭಿಸರುವ ಬೆರಳಚ್ಚು ಹಾಗೂ ಈ ಹಿಂದಿನ ಪ್ರಕರಣ ದಲ್ಲಿ ಶಾಮೀಲಾದವರ ಬೆರಳಚ್ಚುಗಳನ್ನು ತಲೆಹಾಕಲು ಪೊಲೀಸರು ತೀರ್ಮಾನಿದ್ದಾರೆ.ಜೊತೆಗೆ ಸಂಬಂಧಿಕರ ಕೈವಾಡವಾದ ಇರೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಡಿ 13 ಬುಧವಾರ ರಾತ್ರಿ ಮನೆಗೆ ನುಗ್ಗಿದ್ದ ಮೂವರ ತಂಡ ಚಿನ್ನಾಭರಣ , ನಗದು ದರೋಡೆ ನಡೆಸಿ ನಿವೃತ್ತ ಶಿಕ್ಷಕಿ ಯಾಗಿದ್ದ ಜಾನಕಿ ಯ ಕತ್ತು ಕೊಯ್ದು ಕೊಲೆ ಗೈದು , ಪತಿ ಕೃಷ್ಣ ನ್ ರನ್ನು ಕಡಿದು ಗಾಯಗೊಳಿಸಿದ್ದರು.