ಮಂಗಳೂರು, ಆ 08 (Daijiworld News/MSP): ದುಬೈನಿಂದ ಮಂಗಳೂರಿಗೆ ಬಂದು ಗುರುವಾರ ಮುಂಜಾನೆ 4.25ಕ್ಕೆ ಬಂದಿಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಇಳಿಯದೆ ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ ಮುಂಜಾನೆ 5.00 ಕ್ಕೆ ಲ್ಯಾಂಡ್ ಆದ ಬಗ್ಗೆ ಮಾಹಿತಿ ದೊರಕಿದೆ.
ಸಾಂದರ್ಭಿಕ ಚಿತ್ರ
ಏರ್ ಇಂಡಿಯಾದ ಐಕ್ಸ್ 418 ವಿಮಾನ 180 ಪ್ರಯಾಣಿಕರು ಹೊತ್ತು ದುಬೈನಿಂದ ಬಂದಿದ್ದು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ 4.15 ಇಳಿಯಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ವಿಮಾನ ಕೊಯಮತ್ತೂರಿನಲ್ಲಿ ಇಳಿಸಿ ಪೈಲೆಟ್ ಹೊರಟು ಹೋಗಿದ್ದಾರೆ.
ಇನ್ನು ಗುರುವಾರ ಮುಂಜಾನೆ 5.15ರಿಂದ ಹನ್ನೊಂದು ಗಂಟೆಯವರೆಗೂ ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದೆ, ವಿಮಾನದಲ್ಲೇ ಉಳಿಸಿಕೊಳ್ಳಲಾಗಿದೆ. ವಿಮಾನದಲ್ಲಿ 180 ಪ್ರಯಾಣಿಕರು 6 ಗಂಟೆಗೂ ಹೆಚ್ಚು ಕಾಲ ಬಂಧಿಯಾದಂತಿದ್ದು, ಉಸಿರುಗಟ್ಟಿದಂತಾಗುತ್ತಿದೆ. ವಿಮಾನ ಮತ್ತೆ ಕೊಯಮತ್ತೂರಿನಿಂದ ಯಾವಾಗ ಮಂಗಳೂರಿಗೆ ಹಾರಲಿದೆ ಎನ್ನುವ ಮಾಹಿತಿಯನ್ನು ನೀಡಲಾಗುತ್ತಿಲ್ಲ. ಪ್ರಯಾಣಿಕರು ಪ್ರಶ್ನಿಸಿದಾಗ ಬದಲಿ ಪೈಲೆಟ್ ವ್ಯವಸ್ಥೆಯಾಗಬೇಕು ಎಂದು ಸಂಬಂಧಿಸಿದವರು ಉತ್ತರಿಸುತ್ತಿದ್ದಾರೆ ಬಿಟ್ಟರೆ ಬೇರೆನೂ ಮಾಹಿತಿ ನೀಡುತ್ತಿಲ್ಲ.
ವಿಮಾನದಲ್ಲಿ ಮಹಿಳೆಯರು ಮಕ್ಕಳಿದ್ದು ಆಹಾರವನ್ನು ನೀಡದೆ ಪ್ರಯಾಣಿಕರೂ ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರು 'ದಾಜ್ಜಿವಲ್ಡ್ ' ಗೆ ಕರೆ ಮಾಡಿ ಅವಲತ್ತುಕೊಂಡಿದ್ದಾರೆ.