ಪುತ್ತೂರು ಡಿ 19: ಮೈಂದನಡ್ಕದಲ್ಲಿ ಲಾರಿ ಚಾಲಕನು ಅಪ್ರಾಪ್ತೆ ಬಾಲಕಿಯಲ್ಲಿ ಮೊಬೈಲ್ ನಂಬರ್ ಕೇಳಿದ ವಿಚಾರಕ್ಕೆ ಸಂಬಂಧಿಸಿ ಆತನಿಗೆ ಹಲ್ಲೆ ಪ್ರಕರಣ ಮುಂದುವರಿದ ಭಾಗವಾಗಿ ಸಂಪ್ಯ ಠಾಣಾ ಮುಂಭಾಗದಲ್ಲಿ ಸೇರಿದ್ದು ಗುಂಪನ್ನು ಚದುರಿಸುವ ವೇಳೆ ಪೊಲೀಸರ ಲಾಠಿ ಚಾರ್ಜ್ನಿಂದ ತೀವ್ರ ಗಾಯಗೊಂಡ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಡಿ.೧೯ರಂದು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು ವೈಯಕ್ತಿಕ ಧ್ವೇಷದಿಂದ ನಮ್ಮ ಮೇಲೆ ಗುರಿಯಾಗಿಸಿ ಪೊಲೀಸರು ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಡಿ.೧೮ರಂದು ಮೈಂದನಡ್ಕದಲ್ಲಿ ಅನ್ಯಕೋಮಿನ ಲಾರಿ ಚಾಲಕನೊರ್ವ ಅಪ್ರಾಪ್ತೆಯಲ್ಲಿ ಮೊಬೈಲ್ ನಂಬರ್ ಕೇಳಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಮುಂದುವರಿದ ಘಟನೆಯಲ್ಲಿ ಲಾರಿ ಚಾಲಕನಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನಿರಪರಾಧಿಗಳನ್ನು ಪೊಲೀಸರು ಬಂಧಿಸಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಎರಡು ಸಂಘಟನೆಯವರು ಠಾಣೆಯ ಹೊರಭಾಗದಲ್ಲಿ ಜಮಾಯಿಸಿರುವುದು ನಿಜ. ಆದರೆ ಎರಡೂ ಸಂಘಟನೆಯವರು ಪೊಲೀಸರಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮೊಳಗೆ ಯಾವುದೇ ಘರ್ಷಣೆಯೂ ನಡೆದಿಲ್ಲ. ಆದರೂ ನಾವು ಬಸ್ ನಿಲ್ದಾಣದ ಬಳಿ ನಿಂತಿದ್ದು ಆ ವೇಳೆಗೆ ಸ್ಥಳಕ್ಕಾಗಮಿಸಿದ ಎಸ್.ಪಿ ಸುಧೀರ್ ಕುಮಾರ್ ರೆಡ್ಡಿಯವರು ನೆರೆದವರನ್ನು ಚದುರಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಬಜರಂಗದಳದ ರಾಜ್ಯದ ಜವಾಬ್ದಾರಿ ಹೊತ್ತ ಮುರಳಿಕೃಷ್ಣ ಹಸಂತಡ್ಕರವರನ್ನು ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗಿದ್ದಾರೆ. ಅಲ್ಲದೆ ಎಸ್.ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಚಂದ್ರ ಮೊದಲಾದವರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಠಾಣೆಯ ಗೇಟು ಬಳಿಯಿಂದ ಠಾಣೆಯ ಒಳಗಿನ ತನಕ ಹೊಡೆದು ಕೊಂಡು ಹೋಗಿದ್ದಾರೆ. ಠಾಣೆಯ ಒಳಗೆ ಸಿಬಂದಿ ಸುರೇಶ್ ಎಂಬವರು ಕುಡಿದ ಮತ್ತಿನಲ್ಲಿ ಲಾಠಿಯಿಂದ ಹೊಡೆದಿರುತ್ತಾರೆ. ಪೊಲೀಸರು ಎರಡು ಲಾಟಿ ಹುಡಿಯಾಗುವ ತನಕ ನಮಗೆ ಹೊಡೆದಿರುತ್ತಾರೆ. ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ, ಯುವತಿಯರ ಸಾಗಾಟ, ಗಾಂಜಾ, ಜುಗಾರಿ ಅಡ್ಡೆಗಳು ನಡೆಯುತ್ತಿರುವ ಬಗ್ಗೆ ಎಸ್.ಐ ಹಾಗೂ ಸಿಬ್ಬಂದಿಗಳ ವಿರುದ್ದ ಹಿಂದಿನ ಎಸ್.ಪಿ ಭೂಷಣ್ ಜಿ ಬೊರಾಸೆ ಹಾಗೂ ಈಗಿನ ಎಪ್.ಪಿ ಸುಧೀರ್ ಕುಮಾರ್ ರೆಡ್ಡಿಯವರಿಗೆ ದೂರು ನೀಡಿದ್ದೆವು. ಇದೇ ಕಾರಣಕ್ಕೆ ನಮ್ಮನ್ನು ಗುರಿಯಾಗಿಸಿಕೊಂಡು ಧ್ವೇಷ ಸಾಧಿಸಿಕೊಳ್ಳುವುದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಅಜಿತ್ರವರು ಆರೋಪಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ನನ್ನನ್ನು ಪರೀಕ್ಷಿಸಿದ ಡಾ.ಅಜೇಯ್ರವರು ಮೊಣಕಾಲಿನ ಮೂಳೆಮುರಿದಿರುವುದಾಗಿ ತಿಳಿಸಿದ್ದಾರೆ ಎಂದು ಅಜಿತ್ ರೈ ತಿಳಿಸಿದ್ದಾರೆ.