ಮಂಗಳೂರು,ಮಾ. 31(DaijiworldNews/AK): ನಿಟ್ಟೆ ವಿಶ್ವವಿದ್ಯಾಲಯ ದೇಶದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, 2025ರ NIRF ರ್ಯಾಂಕಿಂಗ್ನಲ್ಲಿ 80ನೇ ಸ್ಥಾನವನ್ನು ಪಡೆದಿದೆ. ಮಂಗಳೂರು, ನಿಟ್ಟೆ ಮತ್ತು ಬೆಂಗಳೂರು ಸೇರಿದಂತೆ ಒಟ್ಟು 3 ಸುಸಜ್ಜಿತ ಕ್ಯಾಂಪಸ್ಗಳನ್ನು ಹೊಂದಿರುವ ಈ ಸಂಸ್ಥೆಯಲ್ಲಿ ಮೆಡಿಕಲ್, ಡೆಂಟಲ್, ಫಾರ್ಮಸಿ, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಹಾಸ್ಪಿಟಾಲಿಟಿ ಹಾಗೂ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 160ಕ್ಕೂ ಹೆಚ್ಚು ಕೋರ್ಸ್ಗಳು ಲಭ್ಯವಿದೆ.

ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಶಿಸ್ತಿನ ವಾತಾವರಣ, ನೈತಿಕ ಮೌಲ್ಯಗಳು, ಆಧುನಿಕ ಪ್ರಯೋಗಾಲಯಗಳು, ಸಮೃದ್ಧ ಗ್ರಂಥಾಲಯ, ಉತ್ತಮ ಹಾಸ್ಟೆಲ್ ಹಾಗೂ ಕ್ರೀಡಾ ಸೌಲಭ್ಯಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುತ್ತದೆ.
NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT), ನಿಟ್ಟೆಯಲ್ಲಿ ಪ್ರಮುಖ ಜಾಗತಿಕ ಕಂಪನಿಗಳ ಸಹಯೋಗದೊಂದಿಗೆ 6 ಉತ್ಕೃಷ್ಟತಾ ಕೇಂದ್ರಗಳನ್ನು (Centres of Excellence) ಸ್ಥಾಪಿಸಲಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಕಂಪನಿಗಳ ತಜ್ಞರಿಂದಲೇ ನೇರ ಪ್ರಾಯೋಗಿಕ ತರಬೇತಿ ಮತ್ತು ಸಂಶೋಧನಾ ಅವಕಾಶಗಳು ದೊರೆಯುತ್ತವೆ. ಪ್ರತಿವರ್ಷ 400ಕ್ಕೂ ಹೆಚ್ಚು ಸಂಸ್ಥೆಗಳು ಕ್ಯಾಂಪಸ್ ನೇಮಕಾತಿಯಲ್ಲಿ ಭಾಗವಹಿಸುತ್ತಿದ್ದು, ಈ ಮೂಲಕ ಶೇ. 90ಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಶಸ್ವಿಯಾಗಿ ಉದ್ಯೋಗ ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಭಾರತದ ಪ್ರಮುಖ ಕಂಪನಿಗಳಲ್ಲದೆ, ಅಂತರಾಷ್ಟ್ರೀಯ ಕಂಪನಿಗಳಲ್ಲಿಯೂ ವೃತ್ತಿಜೀವನ ಆರಂಭಿಸುತ್ತಿರುವುದು ವಿಶೇಷ. ಅದರಲ್ಲೂ ಈವರೆಗೆ ಒಟ್ಟು 35 ಜಪಾನೀಸ್ ಕಂಪನಿಗಳಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದಿರುವುದು ಗಮನಾರ್ಹವಾಗಿದೆ.
ನಿಟ್ಟೆ ವಿಶ್ವವಿದ್ಯಾಲಯವು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬೋಧನಾ ಶುಲ್ಕ ವಿನಾಯಿತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಸಂಪೂರ್ಣ ಉಚಿತವಾಗಿ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯಬಹುದು. ಈ ಯೋಜನೆಯಡಿ ನಿಟ್ಟೆಯ ಎರಡು ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳು - NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT), ನಿಟ್ಟೆ ಮತ್ತು ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMIT) ಬೆಂಗಳೂರು, ಇವುಗಳಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯಬಹುದು.
ಬೋಧನಾ ಶುಲ್ಕ ವಿನಾಯಿತಿ ಯೋಜನೆ, ಅರ್ಹತಾ ಮಾನದಂಡಗಳು ಹಾಗೂ ಇತರ ವಿದ್ಯಾರ್ಥಿವೇತನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿವರಗಳಿಗೆ ಸಂಪರ್ಕಿಸಿ. ಅರ್ಜಿ ಸಲ್ಲಿಸಲು: apply.nitte.edu.in . ಸಹಾಯವಾಣಿ: 95131 88844