ಕಾರ್ಕಳ ಡಿ 20: ಕುಕ್ಕುಂದೂರು ಪರಪ್ಪು ಬ್ರಿಡ್ಜ್ ಬಳಿಯಲ್ಲಿ ಕತ್ತರಿಸಿದ ಕರುವೊಂದರ ತಲೆ ಪತ್ತೆಯಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳು ರಾಜಾರೋಷವಾಗಿ ಕಾರ್ಯಚರಿಸುತ್ತಿವೆ ಎಂಬ ಸಾರ್ವಜನಿಕರ ಆರೋಪಕ್ಕೆ ಈ ಪ್ರಕರಣವು ಇನ್ನಷ್ಟು ಪುಷ್ಠಿ ನೀಡುವಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತಿರುವ ಕರುಗಳನ್ನೇ ಗುರಿಯಾಗಿರಿಸಿ ಕದಿಯುತ್ತಿರುವ ಜಾಲವು ಸಕ್ರಿಯಾಗೊಂಡಿದೆ. ಕರುಗಳ ಮಾಂಸವನ್ನು ಕುರಿಯ ಮಾಂಸದೊಂದಿಗೆ ಬೆರೆಸಿ ಹೋಟೆಲ್ ಹಾಗೂ ಕ್ಯಾಟರಿಂಗ್ಗಳಿಗೆ ಸರಬರಾಜು ಮಾಡಲಾಗಿತ್ತಿದೆ. ಇದರಿಂದ ಹೆಚ್ಚಿನ ಆದಾಯಗಳಿಸುವ ಲೆಕ್ಕಚಾರವು ಇದೆ.
ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಕತ್ತರಿಸಿದ ಕರುವೊಂದರ ತಲೆ ಎಸೆದಿರುವ ಘಟನಾವಳಿಯ ಹಿಂದೆ ಕೋಮು ಗಲಭೆ ಹುಟ್ಟು ಹಾಕುವ ಸಂಚು ಇದೆ ಇರಬಹುದೆಂಬ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ
ಈ ಘಟನೆ ವಾಟ್ಸ್ಅಪ್ ಹಾಗೂ ಫೇಸ್ ಬುಕ್ಗಳಲ್ಲಿನ ವೈರಲ್ ಆಗುತ್ತಿದೆ. ಘಟನೆಯ ತೀವ್ರತೆ ಅರಿತು ಕೊಂಡ ಪೊಲೀಸ್ ಇಲಾಖೆ ಬಂದೋಬಸ್ ಏರ್ಪಡಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸುತ್ತಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.