ಮೂಡುಬಿದಿರೆ, ಆ 09 (Daijiworld News/SM): ಕಳೆದ ಮಾರ್ಚ್ 21ರಂದು ಅಪಘಾತವೊಂದರಲ್ಲಿ ಮೃತಪಟ್ಟ ಯುವ ತುಳು ಚಿತ್ರ ನಿರ್ದೇಶಕ ಹ್ಯಾರಿಸ್ ಕೊಣಾಜೆಕಲ್ಲು ಅವರ ಸಾವಿನ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಹ್ಯಾರೀಸ್ ಅವರ ತಂದೆ ಆದಂ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಟಿಡೊಂಜಿ ದಿನ ಸಿನಿಮಾದ ಚಿತ್ರೀಕರಣ ಶಿರ್ತಾಡಿಯಲ್ಲಿ ನಡೆದಿದ್ದ ವೇಳೆಗೆ ಹತ್ತಿರದ ಮೂಡುಕೊಣಾಜೆಯಲ್ಲಿ ಮಾರ್ಚ್ 21ರ ರಾತ್ರಿ ಒಮ್ನಿ ಕಾರು ಮರಕ್ಕೆ ಡಿಕ್ಕಿಯಾಗಿ ಹ್ಯಾರಿಸ್ ಮೃತಪಟ್ಟಿದ್ದರು. ಘಟನೆಯ ದಿನ ರಾತ್ರಿ 11ರ ವೇಳೆಗೆ ಮನೆಗೆ ಬಂದಿದ್ದ ಹ್ಯಾರೀಸ್ 11.20ರ ವೇಳೆಗೆ ಫೋನ್ ಕಾಲ್ಗೆ ಸ್ಪಂದಿಸಿ ಮನೆಯಿಂದ ತೆರಳಿದ್ದರು.
ಹ್ಯಾರೀಸ್ ತನಗೆ ಜೀವಬೆದರಿಕೆಯಿದೆ ಎಂದು ಹೇಳಿರುವುದು, ಆತನ ಮೊಬೈಲ್ ಸಿಮ್ಗಳಿನ್ನೂ ಮನೆಯವರಿಗೆ ಮರಳಿಸದಿರುವುದು, ಚಿತ್ರತಂಡದ ಇಬ್ಬರ ಬಗ್ಗೆ ತನಗೆ ಅನುಮಾನವಿದೆ ಎಂದು ಆದಂ ದೂರಿನಲ್ಲಿ ವಿವರಿಸಿದ್ದಾರೆ. ಇನ್ನು ಶಂಕಿತರನ್ನು ವಿಚಾರಿಸಿ ಸತ್ಯಾಸತ್ಯತೆಯನ್ನು ತಿಳಿಸುವಂತೆ ಆದಂ ಪೋಲೀಸರಿಗೆ ಮನವಿ ಸಲ್ಲಿಸಿದ್ದಾರೆ.