ಉಪ್ಪಿನಂಗಡಿ, ಆ 10 (Daijiworld News/SM): ಕರಾವಳಿಯಲ್ಲಿ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇಲ್ಲಿನ ಮುಗೆರಡ್ಕ ತೂಗುಸೇತುವೆ ಕೊಚ್ಚಿಹೋಗಿದೆ.
ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಮುಗೆರಡ್ಕ-ಉಪ್ಪಿನಂಗಡಿ ಸಂಪರ್ಕಿಸುವ ಸೇತುವೆ ಬೋರ್ಗರೆಯುತ್ತಿರುವ ನದಿ ನೀರಿಗೆ ಸಿಲುಕಿ ಕೊಚ್ಚಿಹೋಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿದೆ ಈ ತೂಗು ಸೇತುವೆ ನಿರ್ಮಿಸಲಾಗಿತ್ತು. ನೂರಾರು ಜನತೆಗೆ ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಸೆತುವೆ ನೆರವಾಗಿತ್ತು.
ಇನ್ನು ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಅಪಾಯದ ಮಟ್ಟ ಮೀರಿದ್ದು, ನದಿ ಕಿನಾರೆಯ ಪ್ರದೇಶಗಳು ಜಲಾವೃತಗೊಂಡಿದೆ. ಮಳೇಯ ಪ್ರಮಾಣ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೊಂದೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಎಲ್ಲಾ ಬಸ್ ಸೇವೆಗಳನ್ನು ರದ್ದುಪಡಿಸಲಾಗಿದೆ.