ಮಂಗಳೂರು, ಆ 10 (Daijiworld News/MSP): ಜಿಲ್ಲೆಯಲ್ಲಿನ ಮಹಾ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಲು ಸಂಬಂಧ ಪಟ್ಟ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳು ಮೂರು ದಿನ ರಜೆ ಇದ್ದರೂ ಕೇಂದ್ರಸ್ಥಾನದಲ್ಲಿ ಇರಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಆ.10 ರಿಂದ ಆ.12ರ ವರೆಗೆ ಎರಡನೇ ಶನಿವಾರ, ಭಾನುವಾರ, ಹಾಗೂ ಬಕ್ರೀದ್ ನಿಮಿತ್ತ ಹೀಗೆ ಸಾಲು ಸಾಲು ಇರುವ ಮೂರು ದಿನಗಳ ಸರ್ಕಾರಿ ರಜೆಯನ್ನು ಯಾರು ತೆಗೆದುಕೊಳ್ಳದೆ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪಸ್ಥಿತರಿರಲು ನಿರ್ದೇಶನ ನೀಡಿದ್ದಾರೆ.