ಮಂಗಳೂರು,ಆ.10 (Daijiworld News/RD): ಮಹಾಮಳೆಯ ಆರ್ಭಟದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪಗಳಿಂದ ನಲುಗಿರುವ ಗ್ರಾಮಗಳಲ್ಲಿನ ಪರಿಹಾರ ಕಾರ್ಯಗಳಲ್ಲಿ ಜಿಲ್ಲಾಡಳಿದೊಂದಿಗೆ ಕೈಜೋಡಿಸಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದಾನಿಗಳ ನೆರವು ಯಾಚಿಸಿದ್ದಾರೆ. ಅಗತ್ಯ ವಸ್ತುಗಳನ್ನು ನೆರವು ನೀಡುವ ದಾನಿಗಳು, ಸಂಘ, ಸಂಸ್ಥೆಗಳು ಕದ್ರಿ ಕೆ.ಪಿ.ಟಿ.ಯಲ್ಲಿ ನೆರೆಪೀಡಿತ ಪ್ರದೇಶಗಳ ಸಂಗ್ರಹಣಾ ಕೇಂದ್ರ ಕ್ಕೆ ನೀಡುವಂತೆ ವಿನಂತಿಸಿಕೊಂಡಿದ್ದಾರೆ
ಸಂತೃಸ್ತರು ತಮ್ಮ ಮನೆಗಳನ್ನು ಕಳೆದುಕೊಂಡು, ಪಾಲನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು, ಅವರಿಗೆ ಅಗತ್ಯ ವಸ್ತುಗಳನ್ನು ನೆರವು ಬೇಕಾಗಿದೆ. ಹೀಗಾಗಿ ಅವರಿಗೆ ಆಹಾರ ಸಾಮಗ್ರಿಗಳು, ಕುಕ್ಕಿಂಗ್ ವಸ್ತುಗಳು, ಗ್ಯಾಸ್ ಸ್ಟವ್, ಪ್ಲಾಸ್ಟಿಕ್ ಬಕೆಟ್, ರೈನ್ ಕೋಟ್, ಟವಲ್, ಬಟ್ಟೆಗಳು, ಸ್ಲಿಪರ್, ಮಾಸ್ಕ್, ಸ್ಯಾನಿಟರಿ ನ್ಯಾಪ್ಕಿನ್ಸ್, ಡೈಪರ್, ಪ್ಲಾಸ್ಟಿಕ್ ಮ್ಯಾಟ್, ಬೆಡ್ ಶಿಟ್, ಸೋಪು, ಟೂತ್ ಬ್ರಶ್ ಮುಂತಾದ ವಸ್ತಗಳ ನೆರವಿಗಾಗಿ ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ.
ಬಂಟ್ವಾಳದಲ್ಲಿ 19 ಜನರ ಎನ್ ಡಿ ಆರ್ ಏಫ್ ತಂಡ, ಹಾಗೂ ಬೆಳ್ತಂಗಡಿಯಲ್ಲಿ 13 ಎನ್ ಡಿ ಆರ್ ಏಫ್ ತಂಡ ಇದೆ. ಕಂಟ್ರೋಲ್ ರೂಮ್ ಟೋಲ್ ಫ್ರೀ ಸಂಖ್ಯೆ 1077 ಆಗಿದ್ದು ಅಪಾಯದ ಸ್ಥಿತಿ ಎದುರಾದರೆ ಕೂಡಲೆ ಸಂಪರ್ಕಿಸಬಹುದು ಎಂದು ತಿಳಿಸಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 631 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.