ಮಂಗಳೂರು ಡಿ 20: ಕುಡ್ಲಾ ಪ್ರಿಮಿಯರ್ ಲೀಗ್ (ಕೆಪಿಎಲ್) ಮೂರನೇ ಸೀಸನ್ ಗೆ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಡಿ 19 ರ ಸಂಜೆ ವರ್ಣರಂಜಿತವಾಗಿ ಚಾಲನೆ ದೊರೆಯಿತು. ಯುವ ಕಾಂಗ್ರೆಸ್ ನಾಯಕ ತೇಜಸ್ವಿನಿ ರಾಜ್ , ದೀಪ ಬೆಳಗಿಸಿ , ಬಲೂನ್ ಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ವರ್ಣರಂಜಿತ ಸುಡುಮದ್ದು , ಹಾಗೂ ಸಾಂಪ್ರದಾಯಿಕ ಚೆಂಡೆ ವಾದ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ರಾತ್ರಿ ಹಗಲು ನಡೆಯುವ ಅಂಡರ್ ಅರ್ಮ್ ಕ್ರಿಕೆಟ್ ಪಂದ್ಯಾಟ ಡಿಸೆಂಬರ್ 19 ರಿಂದ 24 ರವರೆಗೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ಕೆಪಿಎಲ್ ಅಧ್ಯಕ್ಷ ತಿಲಕ್ , ಬಿರುವೆರ್ ಕುಡ್ಲಾದ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಲ್ಲಾಳ್ ಬಾಗ್ , ಚಿತ್ರ ನಿರ್ಮಾಪಕ ಪಮ್ಮಿ ಕೋಡಿಲ್ ಬೈಲ್, ಅಭಿಷೇಕ್ ಅಮಿನ್ ಬಿಕರ್ನಕಟ್ಟೆ ಮತ್ತು ರಾಕೇಶ್ ಪೂಜಾರಿ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ನಾಯಕ ತೇಜಸ್ವಿನಿ ರಾಜ್ ಕಳೆದ ಎರಡು ವರ್ಷಗಳಿಂದ 'ಫ್ರೆಂಡ್ಸ್ ಉರ್ವಾ' ಸದಸ್ಯರು ವ್ಯವಸ್ಥಿತವಾಗ ಕ್ರಿಕೆಟ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದ್ದು ಇದೀಗ ಕೆಪಿಎಲ್ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಪಂದ್ಯಾಟ ಆಟಗಾರರನ್ನು ಮತ್ತು ಕ್ರೀಡಾ ಅಭಿಮಾನಿಗಳನ್ನು ಜತೆ ಸೇರಿಸಲಿದ್ದು, ಏಕತೆ, ಸಂಬಂಧ ಮತ್ತು ಪ್ರತಿಭೆ ಈ ಪಂದ್ಯಾಟದಲ್ಲಿ ಕಾಣಸಿಗುತ್ತದೆ ಎಂದರು.
ಕೆಪಿಎಲ್ ಅಧ್ಯಕ್ಷ ತಿಲಕ್ ಮಾತನಾಡಿದ ಒವರ್ ಆರ್ಮ್ ಫಾರ್ಮೇಟ್ ಪಂದ್ಯಾಟಗಳನ್ನು ನಾವು ಹೆಚ್ಚಾಗಿ ಟಿ.ವಿಗಳಲ್ಲಿ ನೋಡ್ತಾ ಇರುತ್ತೇವೆ ಆದರೆ ಎಲ್ಲಾ ಅಂಡರ್ ಆರ್ಮ್ ಕ್ರಿಕೆಟ್ ಅಭಿಮಾನಿಗಳಿಗೆ ಇದು ಉತ್ತಮ ಅವಕಾಶವಿದ್ದು ಇಲ್ಲಿ ಪ್ರತಿಭೆಗಳಿಗೂ ಉತ್ತೇಜನ ದೊರೆಯುತ್ತದೆ ಎಂದರು. ಆರ್ ಜೆ ಹಾಗೂ ಚಿತ್ರನಟ ರೂಪೇಶ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಬಿರುವರ್ ಕುಡ್ಲಾ, ಎಸ್ ಡಿ ಸಿ ವಾರಿಯರ್ಸ್, ಉರ್ವಾ ಬುಲ್ಸ್, ಜುಗಾರಿ ವಾರಿಯರ್ಸ್, ರೆಡ್ ಹಾಕ್ಸ್ ಮುಂದಾನಾ ಮತ್ತು ಸಿಲ್ವರ್ ಪಾಕ್ಸ್ ಕುಡ್ಲಾ ಗಳು ಕೆಪಿಎಲ್ ಸೀಸನ್ 3 ರಲ್ಲಿ ವಿಜೇತರಾಗಿ ಟ್ರೋಫಿಗಾಗಿ ಸೆಣಸಾಡಲಿದೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಟ್ರೋಪಿಯೊಂದಿಗೆ 3 ಲಕ್ಷ ನಗದು, ರನ್ನರ್ ಅಪ್ 2 ಲಕ್ಷ ನಗದು, ಸರಣಿ ವಿಜೇತರಿಗೆ 1 ಲಕ್ಷ , ಮ್ಯಾನ್ ಆಪ್ ದಿ ಮ್ಯಾಚ್ ಗೆ 25,000 ನಗದು ಬಹುಮಾನ ಸಿಗಲಿದೆ.