ಬಜ್ಪೆ,ಆ.11(Daijiworld News/RD): ಕರಾವಳಿ, ಮಲೆನಾಡು ಸೇರಿದಂತೆ ಮಳೇಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಸಂಪರ್ಕವು ಕಡಿತಗೊಂಡಿದೆ. ಇದೀಗ ಬಜ್ಪೆಯಿಂದ ವಿಮಾನ ನಿಲ್ದಾಣ ಮೂಲಕ ಮಂಗಳೂರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಈಗ ಕುಸಿಯುವ ಹಂತದಲ್ಲಿದೆ.
ರಾಜ್ಯ ಹೆದ್ದಾರಿ 67ರ ಬಜ್ಪೆ ಅಂತೋನಿಕಟ್ಟೆ ಎಂಬಲ್ಲಿ ಈಗಾಗಲೇ ಗುಡ್ಡ ಕುಸಿದು ರಸ್ತೆಗೆ ಬಿದ್ದು, ಈ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಈಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ರಸ್ತೆಯ ಒಂದು ಭಾಗ ಭೂ ಕುಸಿತ ಕಂಡಿದ್ದು, ಇದೀಗ ರಸ್ತೆಯ ಮತ್ತೊಂದು ಭಾಗ ಕೂಡಾ ಕುಸಿಯುವ ಭೀತಿಯಲ್ಲಿದೆ. ಈ ಹಿಂದೆ ಆ ಭಾಗಲದಲ್ಲಿ ಮಣ್ಣನ್ನು ಅಗೆದಿರುವುದರಿಂದ ರಸ್ತೆಯೇ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಇದರಿಂದಾಗಿ ಅಲ್ಲಿ ದಿನನಿತ್ಯ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.. ಒಂದು ವೇಳೆ ಈ ರಸ್ತೆ ಕುಸಿತ ಕಂಡರೆ ವಿಮಾನ ನಿಲ್ದಾಣ- ಕಟೀಲು ರಸ್ತೆ ಕಡಿತವಾಗಲಿದೆ.