ಬೆಳ್ತಂಗಡಿ,ಆ.11(Daijiworld News/RD): ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆ 11. ರ ಭಾನುವಾರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು. ಚಾರ್ಮಾಡಿ, ಕೊಲ್ಲಿ, ಕಿಲ್ಲೂರು, ದಿಡುಪೆಗೆ ಭೇಟಿ ನೀಡಿ ಹಾನಿಯಾದ ಬಗ್ಗೆ ಪರಿಶೀಲಿಸಿ, ನೆರೆ ಸಂತ್ರಸ್ತರಿಗಾದ ನಷ್ಟದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ನೆರೆಪೀಡಿತರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರ ಪುನರ್ವಸತಿಗೆ ಸರಕಾರದೊಂದಿಗೆ ಧರ್ಮಸ್ಥಳ ಯೋಜನೆಯೂ ಸಹಕಾರ ನೀಡಲಿದೆ. ನಿರಾಶ್ರಿತರು ಯಾವುದಕ್ಕೂ ಹೆದರುವ, ಹತಾಶರಾಗುವ ಅವಶ್ಯಕತೆ ಇಲ್ಲ. ಸರಕಾರ ಹಾಗು ಸಮಾಜದ ಜನತೆ ನಿಮ್ಮೊಂದಿಗಿದೆ. ಯೋಜನೆಯ ಕಾರ್ಯಕರ್ತರಿಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ವರದಿ ಬಂದ ಬಳಿಕ ಸರಕಾರದೊಂದಿಗೆ ಬೇಕು ಬೇಕಾದ ಪರಿಹಾರಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಶಾಸಕ ಹರೀಶ್ ಪೂಂಜ, ಯೋಜನಾಧಿಕಾರಿ ಜಯಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.