ಮಂಗಳೂರು ಡಿ 20 : ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸಿಗರಿಗೆ ಇಲ್ಲಿದೆ ಸಿಹಿಸುದ್ದಿ. ರಾಷ್ಟ್ರ ಮಟ್ಟದಲ್ಲಿ ಮೀನಿಗೆ ಗಾಳ ಹಾಕುವ ಸ್ವರ್ಧೆಯನ್ನು ಡಿ 24 ಮತ್ತು ಡಿ 25 ರಂದು ಗೇಟ್ ವೇ ಆಫ್ ಕರ್ನಾಟಕ ಎಂದು ಪ್ರಖ್ಯಾತಿಗೊಂಡ ನವಮಂಗಳೂರು ನಗರದ ಬ್ರೇಕ್ ವಾಟರ್ ಮತ್ತು ಪಣಂಬೂರು ಬೀಚಿನಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಗಾಳ ಹಾಕುವ ಸ್ಪರ್ಧೆಯು ಆಂಗ್ಲಿಂಗ್ ಕಾರ್ನಿವಲ್ ಇಂಡಿಯಾ ಲಾಂಚನದಡಿ ನ ಗಿಫ್ಟೆಡ್ ಇಂಡಿಯಾ ಸಂಘಟನೆಯ ನೇತೃತ್ವದಲ್ಲಿ ನಡೆಯಲಿದೆ. ಈ ಬಗ್ಗೆ ಡಿ 20 ರಂದು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪಣಂಬೂರು ಬೀಚ್ ಟೂರಿಸಂ ಪ್ರೊಜೆಕ್ಟ್ ನ ಸಿಇಒ ಯತೀಶ್ ಬೈಕಂಪಾಡಿ, ಕರಾವಳಿಯ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾಗಿ ಮತ್ತು ಹೊಸ ಆಯಾಮ ನೀಡುವ ಸಲುವಾಗಿ ಆಂಗ್ಲಿಂಗ್ ಕಾರ್ನಿವಲ್ ಇಂಡಿಯಾ ಗಾಳ ಹಾಕುವ ಸ್ಪರ್ಧೆ ಆಯೋಜಿಸಲಾಗಿದೆ , ಬ್ರೇಕ್ ವಾಟರ್ ಮೇಲೆ ಗರಿಷ್ಟ 100 ಸ್ಪರ್ಧಿಗಳ ನಡುವೆ ಗಾಳ ಹಾಕುವ ಸ್ಪರ್ಧೆ ನಡೆಯಲಿದ್ದು , ಕಡಲತಡಿಯಲ್ಲಿ ಸಾರ್ವಜನಿಕರಿಗಾಗಿ ಡಿಜಿಟಲ್ ಲೂಡೋ ಸ್ಪರ್ಧೆ, ಸ್ಟ್ರೀಟ್ ಡ್ಯಾನ್ಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು . ಉಳಿದಂತೆ ಪತ್ರಿಕಾಗೋಷ್ಟಿಯಲ್ಲಿ ಗಿಫ್ಟೆಡ್ ಇಂಡಿಯಾ ಸಂಘಟಕರಾದ ಅನೂಪ್ ಕಾಂಚನ್ , ಕೇತನ್ ಕಾಂಚನ್, ಅವಿಲ್ ಸಾಮ್ ಸನ್ , ಆಶಿಷ್ ಸಿಕ್ವೇರಾ ಮುಂತಾದವರು ಉಪಸ್ಥಿತರಿದ್ದರು .