ಮಂಗಳೂರು ಡಿ 20 : ಪರೇಶ ಮೇಸ್ತಾ ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಡಿಸೆಂಬರ್ 20 ರಂದು ಬುಧವಾರ ಡಿ.ಸಿ. ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ 21 ವರ್ಷದ ಯುವಕ ಪರೇಶ್ ಮೆಸ್ತಾ ಅವರನ್ನು ಕ್ರೂರವಾಗಿ ಕೊಲೆಗೈದದನ್ನು ನೋಡಿದಾಗ ಹೊನ್ನವಾರದಲ್ಲಿ ಜಿಹಾದಿಗಳು ನೆರೆಯೂರಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಅಲ್ಲದೆ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಅಮಾಯಕ ಹಿಂದುಗಳ ಮೇಲೆ ದೌರ್ಜನ್ಯವನ್ನು ತಡೆಯಬೇಕು ಯಾಕೆಂದರೆ ಪ್ರತೀಕಾರಕ್ಕೆ ನಾವು ಸಾಕಷ್ಟು ಸಮರ್ಥರಾಗಿದ್ದೇವೆ ಆದ್ರೆ ಕಾನೂನನ್ನು ಕೈಗೆತ್ತಿಕೊಳ್ಳಲು ಇಷ್ಟವಿಲ್ಲ. ಪರೇಶ್ ಸಾವಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಬೇಕು ಹೀಗಾಗಿ ಶೀಘ್ರದಲ್ಲಿ ಅಪರಾಧಿಯನ್ನು ಬಂಧಿಸಿ ಎಂದು ಇದೇ ವೇಳೆ ಒತ್ತಾಯಿಸಿದರು. ಲವ್ ಜಿಹಾದ್ ಮೋಸದ ಜಾಲಕ್ಕೆ ಸಿಲುಕಿದ ಮೂಡುಬಿದಿರೆ ಪ್ರಿಯಾಂಕ ನಾಪತ್ತೆಯಾಗಿ 10 ದಿನಗಳು ಕಳೆದಿವೆ. ಆದರೆ ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ . ಡಿ 24 ಒಳಗೆ ಪ್ರಿಯಾಂಕ ಪತ್ತೆಯಾಗದಿದ್ದಲ್ಲಿ ಮೂಡುಬಿದಿರಿಯಲ್ಲಿ ಉಗ್ರ ಪತ್ರಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಮೋನಪ್ಪ ಭಂಡಾರಿ ಮಾತನಾಡಿ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತಿದ್ದು ಆದ್ರೆ ರಾಜ್ಯದಲ್ಲಿ ಮಾತ್ರ ಸಿದ್ಧರಾಮಯ್ಯ ಸಮಾಜದ ಒಂದು ಭಾಗವನ್ನು ಮಾತ್ರ ಬೆಂಬಲಿಸುತ್ತಿದ್ದಾರೆ. ಇಲ್ಲಿಯವರೆಗೆ 20 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪಿಎಫ್ಐ, ಎಸ್ ಡಿ ಪಿ ಐ ಮತ್ತು ಕೆಎಪ್ ಡಿ ಮುಂತಾದ ಸಂಘಟನೆಗಳಿಗೆ ಸರ್ಕಾರಿ ಕಚೇರಿ ಪ್ರವೇಶಿಸಿ ಘೇರಾವ್ ಹಾಕುವ ಬಂಢ ಧೈರ್ಯ ಪ್ರದರ್ಶಿಸಿದೆ. ಸರ್ಕಾರಕ್ಕೆ ನಿಜಕ್ಕೂ ಧೈರ್ಯ ಇದ್ದರೆ, ಪಿಎಫ್ಐ, ಎಸ್ ಡಿ ಪಿ ಐ ಮತ್ತು ಕೆಎಪ್ ಡಿ ಸಂಘಟನೆಗಳನ್ನು ನಿಷೇಧಿಸಿ. ಇಲ್ಲವಾದರೆ ಹಿಂದೂ ಯುವಕರ ಕೈಗೆ ಆ ಜವಾಬ್ದಾರಿಯನ್ನು ಹಸ್ತಾಂತರಿಸಿ ಎಂದು ಕಿಡಿ ಕಾರಿದರು. ಇದೇ ವೇಳೆ ಆರೆಸ್ಸೆಸ್ ನ ಡಾ ವಾಮನ ಶೆಣೈ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ, ಬಜರಂಗ ದಳ ಜಿಲ್ಲಾ ಸಂಚಾಲಕ ಬುಜಂಗ ಕುಲಾಲ್, ಸತ್ಯಜಿತ್ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.