ಕಾಪು,ಆ.12(Daijiworld News/RD): ಮಣಿಪುರದ ಕ್ರಿಸ್ತ ಮಹಿಮಾ ಸಿ.ಎಸ್.ಐ. ಚರ್ಚನ ಸಮಾದಿ ಸ್ಥಳದಲ್ಲಿದ್ದ ಶಿಲುಬೆ/ಕ್ರೋಜಿ ಹಾಗೂ ಸಮಾಧಿಯನ್ನು ಕಿಡಿಗೇಡಿಯೊಬ್ಬ ಹಾನಿ ಮಾಡಿದ ಘಟನೆ ಆ.10 ಶನಿವಾರ ನಡೆದಿದೆ. ಆರೋಪಿಯನ್ನು ಕೂಡಲೇ ಬಂಧಿಸಿದ ಕಾಪು ಪೊಲೀಸರು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿ, 24 ವರ್ಷದ ಭೀಮ ಲಿಂಗ ಯಾನೆ ನಾಗರಾಜ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ವಲಸೆ ಕೂಲಿ ಕಾರ್ಮಿಕನಾಗಿದ್ದಾನೆ.ಶನಿವಾರ ಸಂಜೆ ಮಣಿಪುರದ ಚರ್ಚನ ಸಮಾಧಿ ಸ್ಥಳಕ್ಕೆ ಧಿಡೀರನೆ ನುಗ್ಗಿದ ಆರೋಪಿ ಸಮಾಧಿ ಹಾಗೂ ಶಿಲುಬೆಗಳಿಗೆ ಹಾನಿಯುಂಟು ಮಾಡಿದ್ದು, ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯ ನಿವಾಸಿ ಚರ್ಚಿನ ಸಭಾಪಾಲಕ ಕೃಪಾ ಕಿರಣ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.ತಕ್ಷಣ ಸಭಾಪಾಲಕರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಪರಾರಿಯಾಗಿದ್ದ.
ಈ ಸಂದರ್ಭದಲ್ಲಿ ಆರೋಪಿಯ ಪೋಟೋ ತೆಗೆದು ಸ್ಥಳೀಯರು ಪೊಲೀಸರಿಗೆ ನೀಡಿದ ಅಲ್ಲಿನ ನೀಡಿದ್ದರು. ಹೀಗಾಗಿ ಆತನನ್ನು ರವಿವಾರ ಕಾಪು ಪೊಲೀಸರು ಆರೋಪಿಯನ್ನು ಕಟಪಾಡಿಯಲ್ಲಿ ಬಂಧಿಸಿದ್ದಾರೆ. ಶರಾಬಿನ ನಶೆಗೆ ಸಿಲುಕಿ ಈ ಕೃತ್ಯ ಎಸಗಿದ್ದು, ಆತನಲ್ಲಿ ಕೋಮುವಾದದ ದುರುದ್ದೇಶ ಇರಲಿಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಈ ಪ್ರಕರಣದ ಬಗ್ಗೆ ಸ್ಪಷ್ಟಪಡಿಸಿದರು.