ಕೊಲ್ಲೂರು, ಆ 13 (DaijiworldNews/SM): ಕೊಲ್ಲೂರು ದೇವಳದ ಸಾಕಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಸಾಕಾನೆ ಇಂದಿರಾ ಮೃತಪಟ್ಟಿದೆ. ಕಳೆದ 20 ದಿನಗಳಿಂದ 62 ವರ್ಷ ಪ್ರಾಯದ ಆನೆ ಇಂದಿರಾ ಜ್ವರದಿಂದ ಬಳಲುತ್ತಿತ್ತು.
ಆನೆ ಜ್ವರದಿಂದ ಬಳಲುತ್ತಿದ್ದರೂ ಕೂಡ ಮಾವುತ ಬಾಬಣ್ಣ ವಿಶೇಷವಾದ ಮುತುವರ್ಜಿಯನ್ನು ವಹಿಸಿಕೊಂಡಿರಲಿಲ್ಲ. ಅಲ್ಲದೆ, ದೇವಾಲಯದ ಆಡಳಿತಮಂಡಳಿಯೂ ಕೂಡ ಯಾವುದೇ ಲಕ್ಷ್ಯವನ್ನು ವಹಿಸಿಕೊಂಡಿರಲಿಲ್ಲ ಎಂದು ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿರಾ ಆನೆಯನ್ನು ಬಾಳೆಹೊನ್ನೂರಿನಿಂದ ತರಲಾಗಿತ್ತು. ಕೇರಳ ಮೂಲದ ಟಿಂಬರ್ ಮರ್ಚೆಂಟ್ ಈ ಆನೆಯನ್ನು ದಾನ ನೀಡಿದ್ದರು. ಆದರೆ, ಇದೀಗ ಏಕಾಏಕಿ ತೀವ್ರ ಜ್ವರದಿಂದ ಆನೆ ಸಾವನ್ನಪ್ಪಿದೆ.
ಇನ್ನು ಇಂದಿರಾ ಆನೆಯ ಸಾವಿನಿಂದಾಗಿ ಬುಧವಾರದಂದು ಸ್ವಯಂ ಘೋಷಿತ ಕೊಲ್ಲೂರು ಬಂದ್ ಗೆ ಸ್ಥಳೀಯ ಜನ ಕರೆಕೊಟ್ಟಿದ್ದಾರೆ.