ಮಂಗಳೂರು, ಆ.14(Daijiworld News/SS): ಆಟಿಡೊಂಜಿ ದಿನ, ಆಟಿಡ್ ಕಂಡೊಡೊಂಜಿ ದಿನ ಮುಂತಾದವುಗಳು ತುಳುನಾಡಿನ ಆಚಾರ ವಿಚಾರ, ಅನನ್ಯತೆ, ಬದುಕು, ಬವಣೆ, ವಿಶೇಷತೆಗಳನ್ನು ನೆನೆಪಿಸುವ ಕಾರ್ಯಕ್ರಮ. ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಜತನದಿಂದ ಕಾಯ್ದುಕೊಂಡು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಆದಾಗ ಇದರ ಹಿಂದಿರುವ ಆಶಯ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು, ರಜಕ ಯೂತ್ಸ್ ಮಂಗಳೂರು ಹಾಗೂ ತಾಲೂಕು ಸಂಘಗಳ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಸ್ತ ಮಡಿವಾಳ ಬಾಂಧವರಿಗಾಗಿ ಸುರತ್ಕಲ್ ಸೂರಿಂಜೆ ಕುಲ್ಲಂಗಾಲುವಿನಲ್ಲಿ ನಡೆದ ‘ಆಟಿಡ್ ಕಂಡೊಂಡೊಂಜಿ ದಿನ -2019' ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್ ವಹಿಸಿದ್ದರು. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ಎಸ್ಡಿಎಂ ಆಯುರ್ವೇದ ಫಾರ್ಮಸಿಯ ಫ್ಯಾಕ್ಟರಿ ಮೆನೇಜರ್ ಡಾ ಯತಿರಾಜ ಕುಕ್ಕಾಜೆ, ವಿಜಯ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಕೃಷ್ಣ ಬಿ.ಗುಜರನ್, ಸೂರಿಂಜೆ ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ದಯಾನಂದ, ಮುಂಬಯಿ ಹೊಟೇಲ್ ಉದ್ಯಮಿಗಳಾದ ದೇವೆಂದ್ರನ್ ಬುನ್ನಾನ್, ರಾಮ , ಸಮಾಜದ ಹಿರಿಯರಾದ ಮೋನಪ್ಪ ಬಿಜೈ ಅತಿಥಿಯಾಗಿದ್ದರು. ರಜಕ ಯೂತ್ ಅಧ್ಯಕ್ಷ ಸಂಪತ್ ಕೊಂಡಾಣ, ತಾಲ್ಲೂಕು ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ರಾಜು ಗುಜರನ್ ತೋಡಾರ್, ರಮೇಶ್ ಕುಮಾರ್ ಮುಂಬಯಿ ಹಾಗೂ ಸಂಪತ್ ಕೊಂಡಾಣ ಅವರನ್ನು ಸಮ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹೊಟೇಲ್ ಉದ್ಯಮಿ ರಮೇಶ್ ಎಲ್. ಕುಂದರ್, ಧಾರ್ಮಿಕ ದತ್ತಿ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತ ಸಂಜೀವ ಮಡಿವಾಳ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಫರ್ಧೆಗಳು ಜರುಗಿದವು. ಪ್ರತಿಭಾವಂತ ಆಯ್ದ ಸಮಾಜದ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು. ಆಟಿ ತಿಂಗಳ ವಿವಿಧ ತಿನಸುಗಳನ್ನು ಉಣ ಬಡಿಸಲಾಯಿತು. ಭಾಸ್ಕರ್ ಬೇಕಲ್, ಆಶೋಕ್ ಪೊಳಲಿ, ವಿಶ್ವನಾಥ ಕಾಟಿಪಳ್ಳ ವಿವಿಧ ಸ್ಪರ್ಧೆಗಳು, ಸಭಾ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಶಿಧರ ಕೊಂಡಾಣ, ಮೋಹನ ಅಳಪೆ, ಸುಜಾತ ಪ್ರದೀಪ್ ಸಾಲಿಯಾನ್, ರವೀಂದ್ರ ಸಾಲಿಯಾನ್, ಲತಾ ಪ್ರಕಾಶ್ ಸಾಲಿಯಾನ್, ಕಸ್ತೂರಿ ಭಾಸ್ಕರ್, ಆನಂದ ತೊಕ್ಕೊಟ್ಟು, ಕಿರಣ್ ಕುಮಾರ್, ಪ್ರವೀಣ್, ಆಶಾ ಜಿನೇಂದ್ರ, ಜಿನೇಂದ್ರ ಮಾಣಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಸುಧಾಕರ್ ಸಾಲ್ಯಾನ್ ಸ್ವಾಗತಿಸಿ, ಅನೋಲ ಸುರೇಶ್ ವಂದಿಸಿದರು.