ಮಂಗಳೂರು, ಆ 14 (Daijiworld News/SM): ಬೆಳ್ತಂಗಡಿ ರಾಘವೇಂದ್ರ ನಗರದ ಲಾಯಿಲದ ಜಯಂತ್ ಮತ್ತು ಕುಮುದಾ ದಂಪತಿಯ ಪುತ್ರಿ ಸೌಜನ್ಯ ಎಂಬವರು ಇದೀಗ ಚಾರ್ಟಡ್ ಅಕೌಂಟ್(ಸಿಎ) ಪರೀಕ್ಷೆಯನ್ನು ತೇರ್ಗಡೆಯಾಗುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪೂರೈಸಿ, ಬಳಿಕ ಮೆರಿಟ್ ಮುಖಾಂತರ ಎರಡು ವರ್ಷಗಳ ಉಚಿತ ಶಿಕ್ಷಣವನ್ನು ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಸವಿತಾ, ಪ್ರಭಾವತಿ, ಬೇಬಿ ಮತ್ತು ಮಹೇಶ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನವೇ ಇವರ ಸಾಧನೆಗೆ ಸ್ಫೂರ್ತಿ.
ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಶಿಕ್ಷಣಕ್ಕೆ ಬೇಕಾದ ಪೂರಕ ವ್ಯವಸ್ಥೆ ಇಲ್ಲದಿದ್ದರೂ ಸ್ವಪ್ರಯತ್ನದ ಮೂಲಕ ತನ್ನ ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಮನೆಯಲ್ಲಿ ಕುಳಿತು ಕಲಿತು ಸಿಎ-ಸಿಪಿಟಿ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲಿಯೇ ಉತ್ತೀರ್ಣ ಹೊಂದಿ ದ್ವಿತೀಯ ಪಿಯುಸಿಯ ನಂತರ ನೇರವಾಗಿ ಮಂಗಳೂರಿನಲ್ಲಿ ಸಿಎಯನ್ನು ಬಿ. ರಾಮಚಂದ್ರ ಕಾಮತ್ ಹಾಗು ಸಿಎ ದೇವಪ್ಪ ಶೆಣೈ ಅವರ ಬಳಿ ಸಿಎ-ಆರ್ಟಿಕಲ್ ಆಡಿಟ್ ಟ್ರೈನಿ ಆಗಿ ಎರಡು ವರ್ಷದ ಶಿಕ್ಷಣವನ್ನು ಪಡೆಯುವ ಜೊತೆ ಜೊತೆಗೆ ತಮ್ಮ ಸಿಎ ಶಿಕ್ಷಣದ ಎರಡನೇಯ ಹಂತ ಸಿಎ -ಐಪಿಸಿಸಿ ಹಾಗು ಎಓ ವಿಶ್ವ ವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಪಡೆದಿದ್ದಾರೆ.
ಉನ್ನತ ವೃತ್ತಿಪರ ಶಿಕ್ಷಣಕ್ಕಾಗಿ ಬೆಂಗಳೂರಿನ ಡೆಲ್ ಇಂಟರ್ ನ್ಯಾಶನಲ್ ಸರ್ವಿಸಸ್ ಕಂಪೆನಿಯ ಗ್ಲೋಬಲ್ ಅಕೌಂಟಿಗ್ ವಿಭಾಗದಲ್ಲಿ ಗ್ಲೋಬಲ್ ಪೀನಾಸ್ಸ್ ಡೈರೆಕ್ಟರ್ ಸಿಎ ಸುಭಾಶ್ ಜೊತೆ ಒಂದು ವರ್ಷಗಳ ಕಾಲ ತರಬೇತಿಯನ್ನು ಪಡೆದು, ನಂತರ ವಿಶ್ವದ ಬಿಗ್ 4 ಕಂಪೆನಿಗಳಲ್ಲಿ ಒಂದಾದ ಇವೈ (Ernst & Young) ಕಂಪೆನಿಯಲ್ಲಿ ಆಡಿಟ್ ಕನ್ಸಲ್'ಟೆಂಟ್ ಆಗಿಯು ತರಬೇತಿಯನ್ನು ಪಡೆದಿರುತ್ತಾರೆ.