ಭಟ್ಕಳ ಡಿ 21: ವಿಧಾನಸಭಾ ಚುನಾವಣೆಗೆ ಇನ್ನು 4-5 ತಿಂಗಳು ಬಾಕಿ ಇರುವಂತೆಯೇ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ, ಸರಕಾರದ ಸೂಚನೆಯ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ( ಆರ್ಎಎಫ್ ) ಭಟ್ಕಳಕ್ಕೆ ಆಗಮಿಸಿ ಪಥ ಸಂಚಲನ ನಡೆಸಿತು.
ಡಿ 20 ರ ಬುಧವಾರ ಸಂಜೆ ಆರ್ಎಎಫ್ನ ಆರ್ಎಎಫ್ನ ಎಎಸ್ಪಿ ಆರ್.ಸುಂದರ್ ಕುಮಾರ್ ನೇತೃತ್ವದಲ್ಲಿ, 130 ಆರ್ಎಎಫ್ ಸಿಬ್ಬಂದಿಗಳು ಭಟ್ಕಳಕ್ಕೆ ಆಗಮಿಸಿ ಸ್ಥಳೀಯ ಪೊಲೀಸರೊಡಗೂಡಿ ತಾಲೂಕಿನ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸಿದರು. ಕೇರಳ ಕೊಯಮತ್ತೂರಿನ ಈ ಆರ್ಎಎಫ್ ಪಡೆ ಶಿರಸಿ, ಕುಮಟಾ ನಂತರ ಇದೀಗ ಭಟ್ಕಳವನ್ನು ತಲುಪಿದೆ. ಡಿವೈಎಸ್ಪಿ ರಾಬಿನ್ ಪಿ.ಜೆ ಹಾಗೂ ವಿಜಯಲಕ್ಷ್ಮೀ, ಜಿಲ್ಲಾ ಪೊಲೀಸ್ ಎಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ಶಿವಕುಮಾರ್ ಉಪಸ್ಥಿತರಿದ್ದರು.