ಕಾರ್ಕಳ, ಅ 15 (Daijiworld News/MSP): ಬೃಹತಾದಾಕಾರದ ತ್ರಿವರ್ಣ ಧ್ವಜವು ಕಾರ್ಕಳ ಸ್ವಾತಂತ್ರ್ಯೋತ್ಸವದಲ್ಲಿ ಗಮನ ಸೆಳೆಯಿತು. 20 ಅಡಿ ಉದ್ದ 14 ಅಡಿ ಅಗಲ ಹೊಂದಿದ್ದ ತ್ರಿವರ್ಣ ಧ್ವಜವನ್ನು ಪುರಸಭಾ ಸದಸ್ಯ ಶುಭದರಾಜ್ ಅವರ ನೇತೃತ್ವದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಕಳ ಅನಂತಶಯನದಿಂದ ಗಾಂಧಿ ಮೈದಾನದವರೆಗೆ ಸಾಗಿಬಂದರು.
ವಂದೇ ಮಾತರಂ, ಜೈ ಬೊಲೋ ಭಾರತ್ ಮಾತಾಕೀ ದೇಶಭಕ್ತಿ,ಉದೀಪನದ ಘೋಷಣೆಗಳನ್ನು ಕೂಗುತ್ತಾ ಸುರಿಯುತ್ತಿದ್ದ ಜಡಿಮಳೆಯಲ್ಲಿ ಸಂಪೂರ್ಣ ಒದ್ದೆಯೊಂದಿಗೆ ಸಾಗಿದರು. ಇಂತಹ ಬೃಹತ್ ಗಾತ್ರದ ಧ್ವಜವು ಬೆಂಗಳೂರು ಸೇರಿದಂತೆ ದೇಶದ ಮೂರು ಕಡೆ ಮಾತ್ರ ರಾರಾಜಿಸುತ್ತಿರುವುದು ವಿಶೇಷ.