ಕೈಕಂಬ, ಆ 15 (Daijiworld News/MSP): ಹೊಸದಾಗಿ ನಿರ್ಮಾಣ ಮಾಡಿದ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಇಲ್ಲಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿ ಅವರ ಮಗ ರಿತೇಶ್ ಅವರು ನೂತನವಾಗಿ ನಿರ್ಮಿಸಿದ ಮನೆಯ ಹಿಂಬದಿಯ ಗುಡ್ಡ ಜರಿದು ಮನೆಯ ಬಾಗಕ್ಕೆ ಬಿದ್ದು ಮನೆ ಇದೀಗ ಅಪಾಯದ ಅಂಚಿಗೆ ಬಂದು ತಲುಪಿದೆ. ಮಾತ್ರವಲ್ಲದೆ ಇದೇ ಪರಿಸ್ಥಿತಿ ಮುಂದುವರಿದರೆ ಪಲ್ಲಿಪಾಡಿಗೆ ಹೋಗುವ ರಸ್ತೆಯು ಬ್ಲಾಕ್ ಆಗುವ ಸಂಭವವಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ, ತಾಲೂಕು ಆಡಳಿತ ಶಾಖೆಯ ಸೀತಾರಾಮಕಮ್ಮಾಜೆ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್ ಮಾಣಿ, ರೂಪೇಶ್ ಸ್ಥಳಕ್ಕೇ ದಾವಿಸಿ ಪರಿಶೀಲನೆ ನಡೆಸಿದರು.