ಮಂಗಳೂರು: ಮಳೆಯನ್ನು ಲೆಕ್ಕಿಸದೆ ರಾಷ್ಟ್ರಗೀತೆಯ ಮಹತ್ವ ಸಾರಿದ ಶಾಲಾ ವಿದ್ಯಾರ್ಥಿಗಳು - ವಿಡಿಯೋ ವೈರಲ್
Thu, Aug 15 2019 05:58:03 PM
ಮಂಗಳೂರು, ಆ 15 (Daijiworld News/MSP): ಮಳೆಯಿರಲಿ, ಚಳಿಯಿರಲಿ, ಹಿಮವಿರಲಿ, ಜಲವಿರಲಿ, ರಾಷ್ಟ್ರಗೀತೆ ಕೇಳಿದ ತಕ್ಷಣ ಎದೆಸೆಟೆಸಿ ಸಾಲ್ಯೂಟ್ ನೀಡಬೇಕು ಎಂದು ಪ್ರತಿಯೊಬ್ಬ ಭಾರತೀಯನ ಬಾಲ್ಯದಲ್ಲೇ ಅರಿವು ಬಂದಿರುತ್ತದೆ.
ಮುಡಿಪು ಸಮೀಪದ ಸಂಬಾರತೋಟ ಶಾಲೆಯಲ್ಲೂ ಇಂದು 73 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮಕ್ಕಾಗಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದ್ವಜಾರೋಹಣ ಕಾರ್ಯಕ್ರಮಕ್ಕಾಗಿ ಶಾಲಾ ಮೈದಾನದಲ್ಲಿ ನೆರೆದಿದ್ದರು. ಬಂದಿದ್ದ ಅತಿಥಿಗಳು ದ್ವಜಾರೋಹಣ ನಡೆಸಿ ಮಕ್ಕಳು ರಾಷ್ಟ್ರಗೀತೆ ಪ್ರಾರಂಭಿಸಿದಾಗ ಜೋರಾದ ಮಳೆ ಬಂತು. ಈ ಸಂದರ್ಭ ಕಾರ್ಯಕ್ರಮಕ್ಕೆ ಬಂದಿದ್ದ ಅಥಿತಿಗಳು ಮಳೆಯಿಂದ ರಕ್ಷಣೆ ಪಡೆಯಲು ಶಾಲಾ ವರಾಂಡಕ್ಕೆ ಓಡಿ ಹೋದರೆ, ಮಕ್ಕಳು ಮಳೆಯನ್ನು ಲೆಕ್ಕಿಸಿದೆ ಮಾತ್ರ ಒಂದಿಂಚು ಕದಲದೆ ರಾಷ್ಟ್ರಗೀತೆ ಮುಂದುವರಿಸಿ ರಾಷ್ಟ್ರಗೀತೆಯ ಮಹತ್ವ ಸಾರಿದರು. ಮಕ್ಕಳ ಈ ನಡೆ ನೋಡಿದ ಶಿಕ್ಷಕರೂ ಮಕ್ಕಳಿಗೆ ಸಾಥ್ ನೀಡಿದರು.
ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಇದೀಗ ವೈರಲ್ ಆಗಿದ್ದು ಮಕ್ಕಳ ಶಿಸ್ತಿಗೆ ಪ್ರಶಂಸೆ ವ್ಯಕ್ತವಾಗಿದೆ.