ಬೆಳ್ತಂಗಡಿ, ಆ.15(Daijiworld News/SS): ಮಾಜಿ ಯೋಧ, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಸೇತುವೆ ನೀರುಪಾಲಗಿ ದಿಗ್ಭಂಧನಗೊಳಗಾಗಿದ್ದ ಬಾಂಜಾರು ಮಲೆಕುಡಿಯ ಕಾಲನಿಗೆ ತೆರಳಿ, ಅಲ್ಲಿನ ಕಾಲನಿ ನಿವಾಸಿಗಳಿಗೆ ಅಕ್ಕಿ ಆಹಾರೋತ್ಪನ್ನಗಳನ್ನು ತಾವೇ ಖುದ್ದಾಗಿ ಸಾಗಿಸಿ ಸರಳತೆ ಮೆರದಿದ್ದಾರೆ.
ಗಣಪತಿ ಶಾಸ್ತ್ರಿ ಅವರು 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದವರು. ಸೇನೆಯಿಂದ ನಿವೃತ್ತರಾದ ಬಳಿಕ ಅರೂವರೆ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆನಂತರ 2017 ಅಕ್ಟೋಬರ್ನಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಆಗಿ ಬಳಿಕ, 2019 ಜನವರಿಯಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ಕರ್ತವ್ಯವನ್ನು ವ್ಯವಸ್ಥಿತವಾಗಿ ಪೂರೈಸಿ, ಸರಳತೆ ಮೆರೆದ ತಹಶೀಲ್ದಾರ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.