ಬಂಟ್ವಾಳ ಡಿ 21 : ರಿಕ್ಷಾ ಟೆಂಪೋದಲ್ಲಿ ಕರು ಸಾಗಾಟ ಮಾಡುತ್ತಿದ್ದ ಸಂದರ್ಭ ಇಬ್ಬರ ಮೇಲೆ 30 ಜನರ ತಂಡವೊಂದು ಹಲ್ಲೆ ನಡೆಸಿ ದ ಘಟನೆ ಹಲ್ಲಿಪಾದೆಯಲ್ಲಿ ನಡೆದಿದೆ. ಹಲ್ಲಿಪಾದೆಯ ಪೂವಪ್ಪ ಪೂಜಾರಿ ಅವರ ಮನೆಯ ಸಮೀಪದ ಸಯ್ಯತ್ ಇಬ್ರಾಹಿಂ ಅವರ ರಿಕ್ಷಾದಲ್ಲಿ ಕರುವನ್ನು ಮನೆಗೆ ಸಾಕಲು ಡಿ 21 ರ ಬುಧವಾರ ರಾತ್ರಿ ಸುಮಾರು ಹತ್ತು ಘಂಟೆಯ ವೇಳೆ ಕೊಂಡು ಹೋಗುತ್ತಿದ್ದ ವೇಳೆ ಸುಮಾರು ೩೦ರಿಂದ ೪೦ ಜನರ ತಂಡ ಹಲ್ಲೆ ನಡೆಸಿದೆ.ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾವಾಗಿತ್ತು. ಸಕಾಲದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಲಘು ಲಾಠಿ ಪ್ರಹಾರ ನಡೆಸಿದರು. ಬಳಿಕ ಸ್ಥಳದಲ್ಲಿದ್ದ ಹಲವಾರು ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನ ನೇತ್ರತ್ವದಲ್ಲಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ