ಮಂಗಳೂರು ಡಿ 21 : ಪಿಲಿಕುಳದಲ್ಲಿ ನಿರ್ಮಾಣ ಹಂತದಲ್ಲಿರುವ 3D ಪ್ಲಾನೆಟೇರಿಯಮ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ ಡಿ.ಸಿ. ಕಚೇರಿಯಲ್ಲಿ ಡಿಸೆಂಬರ್ 21 ರಂದು ಮಾಧ್ಯಮದೊಂದಿಗೆ ಮಾತನಾಡಿದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತರಾಂ ಜನವರಿ-ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದೊಳಗೆ ಸಾರ್ವಜನಿಕರ ವೀಕ್ಷಣೆಗಾಗಿ 3D ಪ್ಲಾನೆಟೇರಿಯಮ್ ಲಭ್ಯವಾಗಲಿದೆ. ಪ್ಲಾನಿಟೋರಿಯಮ್ ನ್ನು ಸುಮಾರು 35.60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಇಡಲಾಗಿದೆ ಎಂದರು. ಇದು ಭಾರತದ ಮೊದಲ ಯೋಜನೆಯಾಗಿದ್ದು ಹಾಗೂ ಜಗತ್ತಿನಲ್ಲೇ 21 ನೇ ತಾರಾಲಯವಾಗಲಿದೆ ಎಂದರು.
18 ಮೀ ವ್ಯಾಸದ ಮತ್ತು 15 ಡಿಗ್ರಿ ಕೋನದ ಸ್ವಾಮಿ ವಿವೇಕಾನಂದ 3D ತಾರಾಲಯದಲ್ಲಿ, ನ್ಯಾನೋ ಸೀಮ್ ವ್ಯವಸ್ಥೆಯ ಗುಮ್ಮಟ ಹಾಗೂ ಆಪ್ಟೊ ಮೆಕ್ಯಾನಿಕ್ ಮತ್ತು 8K ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಗಳಿರುವ ಈ ಹೈಬ್ರೀಡ್ ತಾರಾಲಯವು ದೇಶದ ಪ್ರಥಮ 3D ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ ಅಡ್ವಾನ್ಸ್ ಟೆಕ್ನಾಲಾಜಿ ಉಳ್ಳ ಈ ತಾರಾಲಯ ಮಕ್ಕಳಿಗೆ ದೊಡ್ಡ ಕೊಡುಗೆಯಾಗಿದೆ.
ಇದಕ್ಕೂ ಮೊದಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಗಳೂರು ತಾಲೂಕಿನ ವಾಮಂಜೂರು ಜಂಕ್ಷನ್ನಿಂದ ಪಿಲಿಕುಳ ನಿಸರ್ಗಧಾಮದ ಮುಖ್ಯ ದ್ವಾರದವರೆಗಿನ ೫ ಕೋಟಿ ವೆಚ್ಚದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ತಂತ್ರಜ್ಞಾನ ಸಚಿವ ಎಂ.ಆರ್.ಸೀತರಾಂ ನೆರವೇರಿಸಿದರು. ಇದೇ ವೇಳೆ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಪಾಲಿಕೆ ಸದಸ್ಯ ಹೇಮಲತಾ ಸಾಲ್ಯನ್ ಅವರನ್ನುಆಹ್ವಾನಿಸಿಲ್ಲ ಎಂದು ಬೆಂಬಲಿಗರು ಪ್ರತಿಭಟನೆ ಮಾಡಿದರು.