ಮಂಗಳೂರು ಡಿ 21 : ಶಾರ್ಟ್ ಸರ್ಕ್ಯೂಟ್ ನಿಂದ ಕಾರೊಂದು ನಡುರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ನಗರದ ಎಂಜಿ ರಸ್ತೆಯಲ್ಲಿ ಡಿ 21ರ ಗುರುವಾರ ನಡೆದಿದೆ. ರಘರಾಮ್ ಎಂಬವರಿಗೆ ಸೇರಿದ ಸ್ಯಾಂಟ್ರೋ ಕಾರು ಚಲಿಸುತ್ತಿದ್ದ ವೇಳೆಯೇ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಹತ್ತಿಕೊಂಡಿದೆ. ಚಲಿಸುತ್ತಿದ್ದಾಗಲೇ ರಸ್ತೆಯಲ್ಲಿಯೇ ಕಾರು ಹೊತ್ತಿಕೊಂಡಿದ್ದು ಗಮನಿಸಿ ಚಾಲಕ ತಕ್ಷಣ ಗಾಡಿ ನಿಲ್ಲಿಸಿದ್ದಾರೆ. ಇದೇ ವೇಳೆ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಸೇರಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕಾರು ಭಾಗಶಃ ಬೆಂಕಿಗೆ ಆಹುತಿಯಾಗಿದೆ. ಬಳಿಕ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ಪೂರ್ತಿಯಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಯಾವುದೇ ಪ್ರಾಣಪಾಯದ ವರದಿಯಾಗಿಲ್ಲ