ಕಾಸರಗೋಡು ಡಿ 21 : ಶಾಲೆಗೆ ನುಗ್ಗಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಮುಂದೆ ಅಶ್ಲೀಲವಾಗಿ ವರ್ತನೆ ಮಾಡಿದ ಖಾಸಗಿ ಶಾಲಾ ಶಿಕ್ಷಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪೈವಳಿಕೆ ಗುಡ್ಡೆ ಮನೆಯ ಮುಹಮ್ಮದ್ ರಫೀಕ್ ( 30) ಎಂದು ಗುರುತಿಸಲಾಗಿದೆ. ಡಿ 21 ಬುಧವಾರ ಸಂಜೆ ಉಪ್ಪಳ ಕುಕ್ಕಾರ್ ಸರಕಾರಿ ಹಯರ್ ಸೆಕಂಡರಿ ಶಾಲೆಯ ಮುಂಭಾಗದ ಬಸ್ಸು ನಿಲ್ದಾಣದಲ್ಲಿ ಘಟನೆ ನಡೆದಿದೆ. ಕಾರಿನಲ್ಲಿ ಶಾಲೆಯ ಬಳಿ ಬಂದು ತಲುಪಿದ್ದ ಈತ ಬಳಿಕ ಅಶ್ಲೀಲ ವಾಗಿ ವರ್ತಿಸುತ್ತಿದ್ದನು ಎನ್ನಲಾಗಿದೆ.ಐದು ದಿನಗಳ ಹಿಂದೆ ಕೂಡಾ ಈತ ಇದೇ ರೀತಿ ವರ್ತಿಸಿದ್ದ ಎನ್ನಲಾಗಿದೆ.
ಬುಧವಾರ ಮತ್ತೆ ಆಗಮಿಸಿ ನಗ್ನನಾಗಲು ಪ್ರಯತ್ನಿಸಿದ್ದು ತಕ್ಷಣ ಈ ಬಗ್ಗೆ ಕುಂಬಳೆ ಪೊಲೀಸರಿಗೆ ಶಾಲಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಕುಂಬಳೆ ಪೊಲೀಸರು ಈತನನ್ನು ವಶಕ್ಕೆ ತೆಗೆದು ಅಡಿಶನಲ್ ಎಸ್.ಐ. ಶಿವದಾಸನ್ ನೇತೃತ್ವದ ಪೊಲೀಸರು ತಕ್ಷಣ ತಲುಪಿ ಮೊಹಮ್ಮದ್ ರಫೀಕ್ನನ್ನು ಬಂಧಿಸಿದ್ದಾರೆ.