ಸುಳ್ಯ ಡಿ 22: ಕಳೆದ ಎರಡು ದಿನಗಳಿಂದ ಸುಬ್ರಹ್ಮಣ್ಯ ದೇವಸ್ಥಾನ ಪರಿಸರದಲ್ಲಿ ಸಂಶಯಾದಸ್ಪದವಾಗಿ ಸುತ್ತಾಡುತ್ತಿದ್ದ ಅನ್ಯ ಕೋಮಿನ ಮಹಿಳೆ ಹಾಗೂ ಯುವಕನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಇಲ್ಲಿನ ರಥಬೀದಿಯಲ್ಲಿ ಮಧ್ಯ ವಯಸ್ಕ ಮಹಿಳೆಯು ಕಳೆದ ಎರಡು ದಿನಗಳಿಂದ ಸಂಶಯಾಸ್ಪದವಾಗಿ ತಿರುಗಾಡುತ್ತಿದದ್ದನ್ನು ಸ್ಥಳೀಯರು ಗಮನಿಸಿದ್ದರು. ಮಹಿಳೆಯೊಂದಿಗೆ ಸುತ್ತಾಡುತ್ತಿದ್ದ ಯುವಕ ಆಕೆಗೆ ಪದೇ ಪದೇ ನಿರ್ದೇಶನ ನೀಡುತ್ತಿದ್ದ ಅದರಂತೆ ಆಕೆ ನಿರಂತರ ಪೋನ್ ಕರೆಗಳನ್ನು ಮಾಡುತ್ತಿದ್ದಳು ಎನ್ನಲಾಗಿದೆ. ಜೋಡಿಯ ಈ ನಡೆಯಿಂದ ಸಂಶಯಗೊಂಡ ಸ್ಥಳೀಯ ಸೆಕ್ಯುರಿಟಿ ಗಾರ್ಡ್ ಒಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಜೋಡಿಯನ್ನು ಡಿ 20 ರ ಬುಧವಾರ ಸುಬ್ರಹ್ಮಣ್ಯ ಸ್ಟೇಷನಿಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಜೋಡಿಯು ತಾವು ಆತ್ಮೀಯ ಗೆಳೆಯರಷ್ಟೇ ಎಂಬ ಹೇಳಿಕೆ ನೀಡಿದ್ದಾರೆ. ಇದರಿಂದ ತೃಪ್ತರಾಗದ ಪೊಲೀಸರು ಬೆಂಗಳೂರಿನಲ್ಲಿರುವ ಜೋಡಿಯ ಮನೆಮಂದಿಯನ್ನು ಸಂಪರ್ಕಿಸಿ ಸ್ಟೇಷನಿಗೆ ಹಾಜರಾಗುವಂತೆ ತಿಳಿಸಿದ್ದಾರೆ. ಮಹಿಳೆಯೊಂದಿಗಿದ್ದ ಯುವಕನ್ನು ಬೆಳ್ಳಾರೆ ತಾಲೂಕಿನ ಫಜಾನ್ ಎಂದು ಗುರುತಿಸಲಾಗಿದೆ. ಪೊಲೀಸ್ ವಶದಲ್ಲಿರುವ ಜೋಡಿಯ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ. ಆದರೆ ಸ್ಥಳೀಯರು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಸಂಶಯಿಸುತ್ತಿದ್ದಾರೆ.