ಮಂಗಳೂರು, ಆ 16 (Daijiworld News/SM): ದೇಶದೊಳಗೆ ಉಗ್ರರು ನುಸುಳಿರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ತೀವ್ರ ಕಟ್ಟೇಚ್ಚರ ವಹಿಸಲಾಗಿದೆ. ಮಂಗಳೂರಿನಲ್ಲಿ ತೀವ್ರ ತಪಾಸಣೆಯ ಸಂದರ್ಭ ಅನುಮಾನಾಸ್ಪದವಾಗಿ ಪತ್ತೆಯಾದ 9 ಮಂದಿಯನ್ನು ವಿಶೇಷ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿದ್ದ 9 ಮಂದಿಯನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದವರ ಪೈಕಿ ಮಡಿಕೇರಿ, ಕೇರಳ ಮತ್ತು ಮಂಗಳೂರು ನಿವಾಸಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ನ್ಯಾಶನಲ್ ಕ್ರೈಮ್ ಇನ್ವೆಶ್ಟಿಗೇಶನ್ ಬ್ಯೂರೋ-ಗಾವರ್ನ್ ಮೆಂಟ್ ಆಫ್ ಇಂಡಿಯಾ ಎಂಬ ಫಲಕವಿರುವ ಕಾರೊಂದನ್ನು ಅನುಮಾನಾಸ್ಪದ ವ್ಯಕ್ತಿಗಳು ಹೊಂದಿದ್ದರು.
ಈ ಕಾರಿನಲ್ಲಿ ಅವರು ಮಂಗಳೂರಿನ ಲಾಡ್ಜ್ ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಸದ್ಯ ಅನುಮಾನಾಸ್ಪದ ವ್ಯಕ್ತಿಗಳಾನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.