ಮಂಗಳೂರು,ಆ 17 (Daijiworld News/RD): ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರಒಕ್ಕೂಟದ ವತಿಯಿಂದ ನಂದಿನಿ ಫ್ಲೆಕ್ಸಿ ಪ್ಯಾಕ್ 9000 ಲೀಟರ್ತೃಪ್ತಿ ಹಾಲು (90 ದಿನಗಳ ದೀರ್ಘ ಬಾಳಿಕೆಯ 180 ಮಿ.ಲೀ.ನ 50000 ಪ್ಯಾಕೆಟ್) ಹಾಗೂ 650 ಸಂಖ್ಯೆ ಬೆಡ್ಶಿಟ್ಗಳನ್ನು ಉತ್ತರ ಭಾಗದ ನೆರೆಪೀಡಿತ ಪ್ರದೇಶದಅಥಣಿ ಮತ್ತುಜಮಖಂಡಿ ಭಾಗದ ನೆರೆ ಸಂತ್ರಸ್ತರಿಗೆ ವಿತರಿಸಲು ಹೊರಟ ವಾಹನಕ್ಕೆ ಒಕ್ಕೂಟದ ಅಧಕ್ಷರಾದ ಶ್ರೀ ರವಿರಾಜ ಹೆಗ್ಡೆಯವರು ಹಸಿರು ನಿಶಾನೆ ಬಾವುಟ ತೋರಿಸಿ ಚಾಲನೆ ನೀಡಿದರು.
ಇದರ ಒಟ್ಟು ಮೌಲ್ಯ ರೂ.5.12 ಲಕ್ಷಗಳಾಗಿರುತ್ತವೆ. ಸದರಿ ಉತ್ಪನ್ನಗಳನ್ನು ಉತ್ತರ ಭಾಗದ ಪ್ರದೇಶಗಳಾದ ಅಥಣಿ ಮತ್ತು ಜಮಖಂಡಿ ಪ್ರದೇಶಗಳ ನೆರೆ ಸಂತ್ರಸ್ತರಿಗೆ ವಿತರಿಸಲು ಅನುಕೂಲವಾಗುವಂತೆಒಕ್ಕೂಟದ ವಾಹನದೊಂದಿಗೆ ಮಾರುಕಟ್ಟೆ ಅಧಿಕಾರಿಗಳಾದ ಶ್ರೀ ಸಚಿನ್ ಸಿ. ಮತ್ತು ಶ್ರೀ ಧನುಷ್ಕುಮಾರ್ ಹೆಚ್.ಎಲ್. ಇವರುಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ, ಕಳುಹಿಸುತ್ತಿರುವುದಾಗಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜಿ.ವಿ ಹೆಗ್ಡೆರವರು ತಿಳಿಸಿದರು.
ದಕ್ಷಿಣಕನ್ನಡಜಿಲ್ಲಾ ವ್ಯಾಪ್ತಿಯ ಸಾಕಷ್ಟು ರೈತರು ಹಾಗೂ ಹೈನುಗಾರರು ತಮ್ಮ ಜಾನುವಾರು, ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿರುತ್ತಾರೆ. ಇವರಿಗೂ ಸಹ ಆರ್ಥಿಕ ಸಹಾಯವನ್ನು ನೀಡುವ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘಗಳೊಂದಿಗೆ ಮನವಿ ಮಾಡಿದ್ದು, ಹಾಗೂ ಒಕ್ಕೂಟದ ಉದ್ಯೋಗಿಗಳ ವಂತಿಗೆಯನ್ನು ಕ್ರೋಢೀಕರಿಸಿ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆರವರು ತಿಳಿಸಿದರು. ಈ ಸಂಧರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಿ.ಎ. ರಾಯ್ಕರ್, ವ್ಯವಸ್ಥಾಪಕರಾದ ಶ್ರೀ ಜಯದೇವಪ್ಪ ಕೆ, ಪ್ರಭಾರ ವ್ಯವಸ್ಥಾಪಕರಾದ ಶ್ರೀ ಹೇಮಂತ್ಕುಮಾರ್, ಸಹಾಯಕ ವ್ಯವಸ್ಥಾಪಕರಾದ ಶ್ರೀ ಸೀನಪ್ಪ ವಿ, ಶ್ರೀ ಅನಿಲ್ ಕುಮಾರ್, ಮಾರುಕಟ್ಟೆ ಅಧಿಕಾರಿ ಶ್ರೀ ಎಂ.ರವಿ ಇವರುಗಳು ಉಪಸ್ಥಿತರಿದ್ದರು.