ಮಂಗಳೂರು,ಆ 17 (Daijiworld News/RD): ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್ ಅಧಿಕಾರಿಗಳು 3.89 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿಯನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಗುರುವಾರ ಸ್ಪೆಸ್ ಜೆಟ್ ಮೂಲಕ ದುಬಾಯಿಗೆ ತೆರಳಲು ಸಿದ್ಧತೆ ನಡೆಸಿದ್ದ ರಝಾಕ್ ಖಾಝಿ ಎಂಬಾತನಿಂದ 3.89 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡೆಸಿಕೊಂಡಿದ್ದಾರೆ. ಆತನು 18 ಸಾ. ದಿರಮ್ಸ್ ಮತ್ತು 2 ಸಾ. ರಿಯಾಲ್ ಗಳನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ. ಸಿಐಎಸ್ಎಫ್ ಎಸ್ಐ ರಾಕೇಶ್ ಕುಮಾರ್ ಮತ್ತು ಸಿಬ್ಬಂದಿ ಪತ್ತೆ ಹಚ್ಚಿ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.