ಬೆಳ್ತಂಗಡಿ,ಆ 17 (Daijiworld News/RD): ರಾಜ್ಯದಲ್ಲಿ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು, ಜನರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ನೆರೆ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪರಿಹಾರ ನಿಧಿ 25 ಕೋಟಿ ನೆರವು ನೀಡಿದೆ.
ಧರ್ಮಸ್ಥಳದ ಬೀಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಡೆ, ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ 25 ಕೋಟಿ,ಜೊತೆಗೆ ಬೆಳ್ತಂಗಡಿ ತಾಲೂಕಿಗೆ 50 ಲಕ್ಷ ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಈಗಾಗಲೇ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಳಿಕ ಚಾರ್ಮಾಡಿ, ಕೊಲ್ಲಿ, ಕಿಲ್ಲೂರು, ದಿಡುಪೆಗೆ ಭೇಟಿ ನೀಡಿ ಹಾನಿಯಾದ ಬಗ್ಗೆ ಪರಿಶೀಲಿಸಿ, ನೆರೆ ಸಂತ್ರಸ್ತರಿಗಾದ ನಷ್ಟದ ಬಗ್ಗೆ ಮಾಹಿತಿ ಪಡೆದಿದ್ದರು. ಈ ಸಂದರ್ಭ ನೆರೆಪೀಡಿತರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರ ಪುನರ್ವಸತಿಗೆ ಸರಕಾರದೊಂದಿಗೆ ಧರ್ಮಸ್ಥಳ ಯೋಜನೆಯೂ ಸಹಕಾರ ನೀಡಲಿದೆ. ನಿರಾಶ್ರಿತರು ಯಾವುದಕ್ಕೂ ಹೆದರುವ, ಹತಾಶರಾಗುವ ಅವಶ್ಯಕತೆ ಇಲ್ಲ. ಸರಕಾರ ಹಾಗು ಸಮಾಜದ ಜನತೆ ನಿಮ್ಮೊಂದಿಗಿದೆ. ಎಂದು ದೈರ್ಯ ತುಂಬಿದ್ದರು.