ನವದೆಹಲಿ, ಡಿ 22: ಬಾಬಾ ವೀರೇಂದ್ರ ದೇವ್ ದೀಕ್ಷಿತ್ ನ ರೋಹಿಣಿ ಆಶ್ರಮದಲ್ಲಿ ಅಕ್ರಮವಾಗಿ ಬಂಧನದಲ್ಲಿದ್ದ 40 ಕ್ಕೂ ಹೆಚ್ಚು ಹುಡುಗಿಯರನ್ನು ರಕ್ಷಣೆ ಮಾಡಲಾಗಿದೆ.
ಈ ಹಿನ್ನೆಲೆ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಆರೋಪಿ ಬಾಬಾ ವೀರೇಂದ್ರ ದೇವ್ ದೀಕ್ಷಿತ್ನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ವಾತಿ ಮಾಲಿವಾಲ್ ಹಾಗೂ ದೆಹಲಿಯ ಅಧಿಕಾರಿಗಳ ತಂಡ ಆಶ್ರಮದ ಮೇಲೆ ದಾಳಿ ನಡೆಸಿದ್ದು, ಹುಡುಗಿಯರನ್ನು ರಕ್ಷಿಸಿದೆ.
ರೋಹಿಣಿ ಆಶ್ರಮವನ್ನು ಸ್ವಯಂ ಘೋಷಿತ ದೇವ ಮಾನವ ವೀರೇಂದ್ರ ದೇವ್ ದೀಕ್ಷಿತ್ ನಡೆಸುತ್ತಿದ್ದು, ತನ್ನ ಆಶ್ರಮದಲ್ಲಿ 16 ಸಾವಿರ ಮಹಿಳೆಯರು ಇರಬೇಕು ಎಂಬ ಅಪೇಕ್ಷೆ ದೀಕ್ಷಿತ್ಗೆ ಇತ್ತು ಎನ್ನಲಾಗಿದೆ. ತನ್ನನ್ನು ಸ್ವಯಂ ಕೃಷ್ಣ ಎಂದು ಘೋಷಣೆ ಮಾಡಿಕೊಂಡಿದ್ದ ದೀಕ್ಷಿತ್ 16000 ಕ್ಕೂ ಹೆಚ್ಚು ಹುಡುಗಿಯರ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದ. ಆಶ್ರಮದಲ್ಲಿರುವ ಮಹಿಳಾ ಭಕ್ತೆಯರ ಜೊತೆಯಲ್ಲಿಯೇ ಸದಾ ಇರ್ತಿದ್ದ ದೀಕ್ಷಿತ್ ಸಂಬಂಧ ಬೆಳೆಸಲು ಅವರನ್ನು ಆಕರ್ಷಿಸುತ್ತಿದ್ದ.