ಮಂಗಳೂರು,ಆ 19 (Daijiworld News/RD): ಕಳೆದ ಹಲವು ದಿನಗಳಿಂದ ವಿಪರೀತ ಮಳೆಯಿಂದಾಗಿ ಸಾಲು ಸಾಲು ರಜೆ ನೀಡುವ ಮೂಲಕ ಜಿಲ್ಲಾಧಿಕಾರಿ ಮುಂಜಾಗೃತ ಕ್ರಮವನ್ನು ಕೈಗೊಳ್ಳುತ್ತಿದ್ದು, ಪಾಠ್ಯ ಕ್ರಮಗಳು ಬಾಕಿ ಉಳಿದಿದ್ದು, ಹಾಗಾಗಿ ಇನ್ನು ಮುಂದೆ ಭಾನುವಾರ ಮತ್ತು ಶನಿವಾರ ದಿನದಂದೂ ಎಂದಿನಂತೆ ಶಾಲೆಯಲ್ಲಿ ತರಗತಿಗಳು ನಡೆಯಲಿದೆ ಎಂದು ಜಿಲ್ಲಾ ಸರ್ವಶಿಕ್ಷಣ ಇಲಾಖೆ ಸೂಚಿಸಿದೆ.
ಮುಂಬರುವ ಹತ್ತು ದಿನ ಶನಿವಾರವು ಮಧ್ಯಾಹ್ನದ ನಂತರವೂ ತರಗತಿ ನಡೆಯಲಿದ್ದು, ಭಾನುವಾರವೂ ನಡೆಸಬೇಕೇ ಎನ್ನುವುದು ಇನ್ನೂ ತಿರ್ಮಾನವಾಗಿಲ್ಲ. ಈ ಬಗ್ಗೆ ಇನ್ನು ಮೂರು ದಿನದೊಳಗೆ ಡಿಡಿಪಿಐ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.
ನೆರೆ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಹೆಚ್ಚಿನ ಗಮನವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಮನೆಗೆ ಸಂಪರ್ಕ ಒದಗಿಸುವ ರಸ್ತೆ ಸೇತುವೆಗಳು ಹಾನಿಗೊಂಡು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೆ, ಅಂತಹ ವಿದ್ಯಾರ್ಥಿ ಒತ್ತಾಯಿಸುವುದು ಬೇಡ ಎಂದಿದೆ. ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಿ ಎಂದಿದ್ದಾರೆ. ಇನ್ನು ಪ್ರವಾಹಪೀಡಿತ ಪ್ರದೇಶಗಳಲ್ಲಿ ಶಾಲೆ ಆರಂಭಿಸುವ ಮುಂಚಿತವಾಗಿ ಎಂಜಿನಿಯರಿಂಗ್ ಮೂಲಕ ಕಟ್ಟಡ ಪರಿಶೀಲನೆ ನಡೆಸಬೇಕೆಂದು ಇಲಾಖೆ ಸುತ್ತೋಲೆ ಕಳುಹಿಸಿದೆ.
ಕರಾವಳಿಯದ್ಯಂತ ಭಾರಿ ಮಳೆಯ ಹಿನ್ನೆಲೆಯಲ್ಲಿ ಹವಾಮನ ಇಲಾಖೆ ಮುನ್ಸಾಚನೆಯ ಮೇರೆಗೆ ಜಿಲ್ಲಾಡಳಿತ ರಜೆ ಘೋಷಿಸುತ್ತಾ. ಜಿಲ್ಲೆಯಲ್ಲಿ ಮಳೆಯಿಂದ ವಿದ್ಯಾರ್ಥಿಗಳೆ ಯಾವುದೇ ಅಪಾಯ ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಸತತ ಐದು ದಿನಗಳ ರಜೆಯನ್ನು ಘೋಷಿಸಿತ್ತು. ಇದರಿಂದಾಗಿ ಪಾಠಗಳು ಬಾಕಿ ಉಳಿದಿದ್ದು, ಮುಂಬುರುವ ಪರೀಕ್ಷೆಗೆ ಅಡ್ಡಿಯಾಗಬಹುವುದು ಎಂದು ಅರಿತುಕೊಂಡು ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.