ಬಂಟ್ವಾಳ,ಆ 19 (Daijiworld News/RD): ನೆರೆ ಸಂತ್ರಸ್ತರಿಗೆ ಪಾಕೃತಿಕ ವಿಕೋಪದಡಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುದು, ತುಂಬೆ ಹಾಗೂ ಸಜೀಪ ನಡು ಗ್ರಾ.ಪಂ.ವ್ಯಾಪ್ತಿಯ ಸುಮಾರು 56 ಫಲಾನುಭವಿಗಳಿಗೆ ಸರಕಾರದಿಂದ ನೀಡಿದ ಹತ್ತು ಸಾವಿರ ರೂ ಮೊತ್ತದ ಚೆಕ್ ವಿತರಣೆಯನ್ನು ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಾಸಕ ಮಾಜಿ ಸಚಿವ ಯು.ಟಿ.ಖಾದರ್ ನಡೆಸಿದರು.
ಬಳಿಕ ಮಾತನಾಡಿ ಮಡಿಕೇರಿಯಲ್ಲಿ ಕಳೆದ ಬಾರಿ ನೆರೆ ಸಂತ್ರಸ್ತರಿಗೆ ಪಾಕೃತಿಕ ವಿಕೋಪದಡಿಯಲ್ಲಿ ಸರಕಾರ ನೀಡಿದ ಮಾದರಿಯಲ್ಲಿ ಇಲ್ಲಿಯೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಗೆ ಮನವಿ ಮಾಡಲಾಗಿದೆ, ಮುಖ್ಯ ಮಂತ್ರಿ ಮನವಿಗೆ ಸ್ಪಂದಿಸುವ ಭರವಸೆ ಇದೆ ಎಂದು ಅವರು ಹೇಳಿದರು. ಪಾಕೃತಿಕ ವಿಕೋಪದಂತಹ ಘಟನೆಗಳ ಬಗ್ಗೆ ಮುಂಜಾಗ್ರತಾ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆ ನೀರು ಹರಿದುಹೋಗಲು ಚರಂಡಿಯ ವ್ಯವಸ್ಥೆ ಗಳನ್ನು ಮಳೆ ಗಾಲ ಆರಂಭವಾಗುವ ಮೊದಲು ಮಾಡುವಂತೆ ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಾಕೃತಿಕ ವಿಕೋಪದಡಿಯಲ್ಲಿ ಸರಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳು ಪಡೆಯುವಂತೆ ವಿನಂತಿಸಿದರು. ನೆರೆಯ ಸಂದರ್ಭದಲ್ಲಿ ಮತ್ತು ಬಳಿಕ ಪರಿಹಾರದ ಕಾರ್ಯದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಉತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು. ನೆರೆಯ ಸಂದರ್ಭದಲ್ಲಿ ಸಹಕಾರ ನೀಡಿದ ಸಂಘ ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಸರಕಾರದ ವತಿಯಿಂದ ಪ್ರಶಸ್ತಿ ನೀಡಲು ಸರಕಾರದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗ್ರಾಮ ಪಂಚಾಯತ್ ಅದ್ಯಕ್ಷ ರಮ್ಲಾನ್, ., ಜಿ.ಪಂ. ಸದಸ್ಯ ರವೀಂದ್ರ ಕಂಬಳಿ,ತಾಲೂಕು ಪಂಚಾಯತ್ ಸದಸ್ಯ ಗಣೇಶ್ ತುಂಬೆ, ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ. ಗ್ರಾಪಂ.ಸದಸ್ಯರಾದ ನಜೀರ್ ಕುಂಜತ್ಕಲ, ರಿಯಾಜ್ ಕುಂಪಣಮಜಲು,ಮಹಮ್ಮದ್ ಮೋನು, ಅಬ್ದುಲ್ ಹಮೀದ್, ಭಾಸ್ಕರ ರೈ, ಅಕ್ತರ್ ಹುಸೇನ್, ಇಕ್ಬಾಲ್, ವೃಂದಾ ಪೂಜಾರಿ, ಯೋಗೀಶ್ ಪ್ರಭು, ಎಪ್.ಎಸ್.ಮಹಮ್ಮದ್ , ಹಾಸೀರ್ ಪೆರಿಮಾರ್ ಪರಂಗಿಪೇಟೆ ಮಸೀದಿ ಅಧ್ಯಕ್ಷ ಮಹಮ್ಮದ್ ಭಾವ, ತಹಶೀಲ್ದಾರ್ ರಶ್ಮಿ. ಎಸ್.ಆರ್, ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಮಾಜಿ ತಾ.ಪಂ.ಸದಸ್ಯ ಆಸೀಪ್ ಇಕ್ಬಾಲ್, ಪ್ರಮುಖರಾದ ಎಸ್ ಅಬುಬಕರ್ ಸಜೀಪ, ದಿನೇಶ್ ಶೆಟ್ಟಿ ಕೊಟ್ಟಿಂಜ, ಕೃಷ್ಣಕುಮಾರ್ ಪೂಂಜಾ, ಮಜೀದ್ ಪೆರಿಮಾರ್ , ಇಬ್ರಾಹಿಂ ವಳವೂರು, ಹಾತೀಕ್ ಪರಂಗಿಪೇಟೆ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, .ಡಿ.ಒ.ಪ್ರೇಮಲತಾ, ಕಾರ್ಯದರ್ಶಿ ಅಶ್ಬಿನಿ, ಸಿಬ್ಬಂದಿಗಳಾದ ಅಬ್ದುಲ್ ಸಲಾಂ, ವಿನಯ ಮತ್ತು ಯಶೋಧ ಉಪಸ್ಥಿತರಿದ್ದರು.