ಮೂಡುಬಿದಿರೆ, ಡಿ 22: ಮದುವೆಯ ಹಿಂದಿನ ದಿನ ಪ್ರಿಯಕರನೊಂದಿಗೆ ತೆರಳಿ ಮದುವೆಯಾಗಿದ್ದಾಳೆ ಎನ್ನಲಾಗಿರುವ ಮೂಡುಬಿದ್ರೆ ಧರೆಗುಡ್ಡೆಯ ಪ್ರಿಯಾಂಕ ಇದೀಗ ಮುಂಬೈಯಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈಕೆ ತನ್ನ ಪತಿ ಹೈದರ್ನೊಂದಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನೆ ಮಂದಿ ಮಲಗಿದ್ದ ಸಂದರ್ಭದಲ್ಲಿ ಪ್ರಿಯಾಂಕ ತಾನು ಪ್ರಿತಿಸುತ್ತಿದ್ದ ಗೆಳೆಯನ ಜೊತೆಗೆ ತೆರಳಿದ್ದಳು. ಈಕೆ ನಾಪತ್ತೆ ಪ್ರಕರಣ ಬಹಳಷ್ಟು ವಿವಾದಗಳಿಗೆ ಕಾರಣವಾಗಿತ್ತು.
ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ಪೊಲೀಸರು ಇವರಿಬ್ಬರನ್ನೂ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದವು. ಅದರಂತೆ ಮೂಡುಬಿದ್ರೆ ಮತ್ತು ಪಣಂಬೂರು ಠಾಣಾ ಪೊಲೀಸರು ಈಕೆ ಪತ್ತೆಗೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದರು.