ಮಂಗಳೂರು, ಆ 18 (DaijiworldNews/SM): ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ವಿದೇಶಿ ಕರೆನ್ಸಿಗಳನ್ನು ಸಿಐಎಸ್ಎಫ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈಗೆ ತೆರಳುತ್ತಿದ್ದ ಬೆಂಗಳೂರು ಮೂಲದ ಶಶಾಂಕ್ ಆರೋಪಿಯಾಗಿದ್ದು, ಈತ ಸುಮಾರು ಹತ್ತು ಸಾವಿರ ಅಮೇರಿಕನ್ ಡಾಲರ್ ಕರೆನ್ಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ 100 ಯುಎಸ್ ಡಾಲರ್ ಮುಖಬೆಲೆಯ 51 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ವಿದೇಶಿ ಹಣದ ನೋಟಿನ ಕಂತೆಯನ್ನು ಪ್ರಯಾಣಿಕನು ಪ್ಯಾಂಟ್ನ ಜೇಬಿನಲ್ಲಿಟ್ಟು ಸಾಗಿಸುತ್ತಿದ್ದ ಎನ್ನಲಾಗಿದೆ. ಬಳಿಕ ಸ್ವಾಧೀನ ಪಡೆಸಿದ ಸೊತ್ತುಗಳು ಹಾಗೂ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.