ಬೆಂಗಳೂರು, ಡಿ 22: ಸ್ಯಾಂಡಲ್ ವುಡ್ ಡೈರೆಕ್ಟರ್ ಮೆಲ್ವಿನ್ ಅವರ ವಿರುದ್ಧ ವಂಚನೆ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಬೈ ಮೂಲದ ಐಟಂ ಡ್ಯಾನ್ಸರ್ ಶರಣ್ಯಾ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನಿರ್ದೇಶಕ ಮೆಲ್ವಿನ್ ಮುಂದಾಗಿದ್ದರು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 'ಹುತ್ತದ ಸುತ್ತಾ' ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಲು 1 ದಿನಕ್ಕೆ 15000ರೂ ಸಂಭಾವನೆ ನೀಡುವುದಾಗಿ ಡೈರೆಕ್ಟರ್ ಮೆಲ್ವಿನ್ ಒಪ್ಪಿದ್ದು, ಹಣ ಕೊಡದೆ ಮೋಸ ಮಾಡಿದ್ದಾರೆ. ಇದರ ಜೊತೆಗೆ ಫಿಲ್ಮಂ ಬಗ್ಗೆ ಮಾತನಾಡುವುದಾಗಿ ಕರೆದು ಅಸಹ್ಯವಾಗಿ ವರ್ತಿಸುತ್ತಾರೆ ಹಾಗೂ ಸೆಕ್ಸ್ಬಗ್ಗೆ ಮಾತನಾಡುತ್ತಾರೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ
ಆದರೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಡೈರೆಕ್ಟರ್ ಮೆಲ್ವಿನ್ ಶರಣ್ಯಾ ಬೆಂಗಳೂರಿಗೆ ಬಂದಾಗ ಅವರಿಗೆ ವಾಸಿಸಲು ಲಾಡ್ಜ್ ಬದಲು, ಹೆಣ್ಣುಮಕ್ಕಳು ವಾಸಿಸುವ ಮನೆಯೊಂದರಲ್ಲಿ ವಾಸ್ತವ್ಯ ನೀಡಲಾಗಿತ್ತು. ಅವರ ಎಲ್ಲಾ ಖರ್ಚುಗಳನ್ನ ನಾವೇ ನೋಡಿಕೊಂಡಿದ್ದೇವೆ. ಆದರೆ ಶೂಟಿಂಗ್ ವೇಳೆ ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ, ಬೇರೆ ಐಟಂ ಡ್ಯಾನ್ಸರ್ ಜೊತೆ ಶೂಟಿಂಗ್ ಮುಗಿಸಿದೆವು. ಈ ವೇಳೆ ಮುಂಬೈಯಿಂದ ಬಂದಿದ್ದಕ್ಕಾಗಿ 3000 ಖರ್ಚು ವೆಚ್ಚವನ್ನ ಕೊಟ್ಟು ಕಳುಹಿಸಿದ್ದೇವೆ. ಆದರೆ ಶರಣ್ಯಾ ಪೂರ್ತಿ 15 ಸಾವಿರ ಹಣ ನೀಡುವಂತೆ ಪೀಡಿಸುತ್ತಿದ್ದಳು. ಡ್ಯಾನ್ಸ್ ಮಾಡದೇ ಹೇಗೆ ಹಣ ನೀಡುವುದು ಎಂದು ಕೇಳಿದ್ದೇವು ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.