ಉಡುಪಿ, ಆ 18 (DaijiworldNews/SM): ಫೋನ್ ಕದ್ದಾಲಿಕೆ ಯಾರೇ ಮಾಡಿದರೂ ಅದು ತಪ್ಪು. ಯಾರು ಯಾಕೆ, ಯಾವಾಗ, ಯಾರ ಫೋನ್ ಕದ್ದಾಳಿಕೆ ಮಾಡಿದ್ದಾರೆ ಅನ್ನೋದು ಮುಖ್ಯ. ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ತಪ್ಪು ಮಾಡಿಲ್ಲ ಅಂದ್ರೆ ಯಾರಿಗಾದರೂ ಅಪರಾಧ ಭಾವನೆ ಇರುವ ಅಗತ್ಯವಿಲ್ಲ. ಏನಾದರೂ ದುರುಪಯೋಗ ಪಡಿಸಿಕೊಂಡರೆ ತನಿಖೆಯಿಂದ ಹೊರಬೀಳಲಿ ಎಂಬುದು ಸರಕಾರದ ಇಚ್ಛೆಯಾಗಿದೆ ಎಂದರು.
ತನಿಖೆ ನಡೆಸಲು ಯಾವುದೇ ನಾಯಕರು ಸಿದ್ಧವಾಗಿದ್ದರೆ ತುಂಬಾ ಖುಷಿಯ ವಿಚಾರವಾಗಿದೆ. ಕುಮಾರಸ್ವಾಮಿ ಏನೂ ಮಾಡಿಲ್ಲ ಎಂದಾದರೆ ಖುಷಿಯಾಗಿರಲಿ. ನಮಗೂ ಅದು ಖುಷಿಯ ವಿಚಾರವಾಗಿದೆ ಎಂದರು.