ಬೆಳ್ತಂಗಡಿ, ಆ 19 (DaijiworldNews/SM): ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಹಿಂದೆಂದೂ ನಡೆಯದಂತಹ ಭೂ ಕುಸಿತಗಳು ಸಂಭವಿಸಿವೆ. ಚಾರ್ಮಾಡಿಯಲ್ಲಿ ನಡೆದ ಭಾರೀ ಭೂ ಕುಸಿತದಿಂದಾಗಿ ಹಲವು ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ನಾಶಗೊಂಡಿವೆ.
ಇನ್ನು ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಕೆಲವು ಗ್ರಾಮಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಕೆಲವು ಗ್ರಾಮಗಳಿಗೆ ಉಂಟಾದ ಚಿತ್ರಗಳು ಇದೀಗ ವೈರಲ್ ಆಗುತ್ತಿವೆ.
ಚಾರ್ಮಾಡಿ ಘಾಟಿಯ ಇನ್ನೊಂದು ಮಗ್ಗುಲು ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ, ಬಲಿಗೆ, ಹಾಗೂ ಕೆಳಗೂರು, ಮಲೆಮನೆ, ಜಾವ್ಳೆ, ಬಾಳೂರು, ಮೇಗೂರು ಮುಂತಾದ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಒಟ್ಟಾರೆ ಚಾರ್ಮಾಡಿ ಘಾಟಿಯ ಮೂರೂ ಕಡೆಗಳಲ್ಲೂ ಹಾನಿ ಸಂಭವಿಸಿದ್ದು, ಕಳೆದ ವರ್ಷ ಜೋಡುಪಾಲದಲ್ಲಿ ಉಂಟಾಗಿರುವ ಘಟನೆಯನ್ನು ನೆನಪಿಸುತ್ತಿದೆ.